ರಸ್ತೆ ಅಪಘಾತ- ಪಿಡಿಓ ಸಾವು…!

ದಕ್ಷಿಣ ಕನ್ನಡ: ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ನ ಪಿಡಿಒ ಶಿವು ಜನಗೊಂಡ ಎಂಬುವವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಕೆಲ ದಿನಗಳ ಹಿಂದೆ ಅಪಘಾತಕ್ಕೀಡಾಗಿದ್ದ ಅವರಿಗೆ ಎರಡು ದಿನಗಳ ಹಿಂದೆ ದೇಹಾರೋಗ್ಯ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ಮೂಲತಃ ಅಥಣಿಯವರಾದ ಅವರು ಅವಿವಾಹಿತರು. ಬಿ.ಸಿ.ರೋಡಿನ ಕೈಕುಂಜೆಯಲ್ಲಿ ವಾಸವಾಗಿದ್ದರು.