ಹಿರಿಯ ಪತ್ರಿಕಾ ವಿತರಕ ಪ್ರಕಾಶಕುಮಾರ ನಿವೃತ್ತಿ: ಕ್ಷೇಮಾಭಿವೃದ್ಧಿ ಸಂಘದವರು ಮಾಡಿದ್ದೇನು ಗೊತ್ತಾ..?
ಶಿವಮೊಗ್ಗ: ಹಿರಿಯ ಪತ್ರಿಕಾ ವಿತರಕ ಹಾಗೂ ಟೈಮ್ಸ್ ಪತ್ರಿಕೆ ಏಜೆಂಟ್ ರಾದ ವಿ.ಪ್ರಕಾಶಕುಮಾರ್ ತಮ್ಮ ವೃತ್ತಿ ಜೀವನದಿಂದ ನಿವೃತ್ತರಾಗಿದ್ದು, ಅವರಿಗಿಂದು ದಿನಪತ್ರಿಕೆ ಉಪ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆತ್ಮೀಯವಾಗಿ ಸತ್ಕರಿಸಲಾಯಿತು.
ವಿ.ಪ್ರಕಾಶಕುಮಾರ ತಮ್ಮ ಜೀವನದ ಬಹುತೇಕ ಸಮಯವನ್ನ ಪತ್ರಿಕಾರಂಗದವರ ಜೊತೆ ಕಳೆದಿದ್ದಾರೆ. ಪತ್ರಿಕೆಗಳ ವಿತರಣೆಯಲ್ಲೂ ತಮ್ಮತನವನ್ನ ಉಳಿಸಿಕೊಂಡು ಬಂದಿದ್ದು, ಎಲ್ಲರೊಂದಿಗೂ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಇಂತವರನ್ನ ಆದರದಿಂದ ಸತ್ಕರಿಸಿದ್ದು ಎಲ್ಲರಲ್ಲೂ ಸಂತಸವನ್ನ ನೀಡಿತ್ತು.
ಸಂಘದ ಅಧ್ಯಕ್ಷ ಮುಖ್ತರ್ ಅಹಮ್ಮದ್, ಉಪಾಧ್ಯಕ್ಷ ಗಣೇಶ್ ಭಟ್ ಯು, ಖಜಾಂಚಿ ಮಂಜುನಾಥ್ ಎಸ್. ಹೆಚ್, ಮಾಧ್ಯಮ ಪ್ರತಿನಿಧಿ ಮಾಲತೇಶ ಎನ್, ನಿರ್ದೇಶಕರುಗಳಾದ ಕುಮಾರ್ , ಹರ್ಷ, ಗುರುರಾಜ್, ಧನಂಜಯ್ ಹಾಗೂ ಪತಂಜಲಿ ದಿನಪತ್ರಿಕೆಯ ಸಂಪಾದಕ ಜೆ.ನಾಗರಾಜ್ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.