ಪಾಲಕರಿಗೆ “ಒಬ್ಬ”ನೇ ಮಗನಾಗಿದ್ದ ‘ರಫೀಕ್’- ತನ್ನಿಬ್ಬರು ಮಕ್ಕಳನ್ನ ಅನಾಥ ಮಾಡಿ ಹೊರಟು ನಿಂತ…

ಹುಬ್ಬಳ್ಳಿ: ಬೆಳ್ಳಂಬೆಳಿಗ್ಗೆ ನಗರದ ಹೊರವಲಯದ ವರ್ತುಲ ರಸ್ತೆಗೆ ಅಂಟಿಕೊಂಡಿರುವ ಮಂಟೂರ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಚಾಲಕ ದುರ್ಮರಣಕ್ಕೀಡಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅಮರಗೋಳದಲ್ಲಿ ನೀರವ ಮೌನ ಮೂಡಿಸಿದೆ.
34 ವರ್ಷದ ರಫೀಕ ನದಾಫ ಹಲವು ವರ್ಷಗಳಿಂದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಚಾಲಕನಾಗಿ ಸೇರಿಕೊಂಡಿದ್ದ. ಎಲ್ಲ ಅಧಿಕಾರಿ ವರ್ಗದ ಜೊತೆಗೆ ಉತ್ತಮ ಒಡನಾಟ ಹೊಂದಿದ್ದನಾದರೂ, ತನ್ನ ಕರ್ತವ್ಯದಲ್ಲಿ ಉತ್ತಮನಾಗಿದ್ದ.
ಆದರೆ, ಜವರಾಯ ಇಂದು ಲಾರಿಯ ಮೂಲಕ ರಫೀಕನ ಜೀವ ತೆಗೆದಿದೆ. ತನ್ನ ಪಾಲಕರಿಗೆ ಒಬ್ಬನೇ ಮಗನಾಗಿದ್ದ ರಫೀಕ್ ಇಬ್ವರು ಪುತ್ರರನ್ನ ಹೊಂದಿದ್ದಾರೆ. ಐದಾರು ವಯಸ್ಸಿನ ಮಕ್ಕಳನ್ನ ನೋಡಿ ಎಲ್ಲರೂ ಮರುಗುವಂತಾಗಿದೆ.