ಕೋಟೂರ ಪಂಚಾಯತಿ “ದಿಲಾವರ”- ಜನರಿಗೆ ಉಚಿತ ವಾಹನದ ವ್ಯವಸ್ಥೆ…!

ಧಾರವಾಡ: ತಾಲೂಕಿನ ಕೋಟೂರ ಗ್ರಾಮ ಪಂಚಾಯತಿ ಸದಸ್ಯರೋರ್ವರು, ಕೊರೋನಾ ಮಹಾಮಾರಿಯನ್ನ ಹಿಮ್ಮೆಟ್ಟಿಸಲು ಸಾರ್ವಜನಿಕರ ಉಪಯೋಗಕ್ಕಾಗಿ ವಾಹನದ ವ್ಯವಸ್ಥೆಯನ್ನ ಕಲ್ಪಿಸಿದ್ದಾರೆ.

ಕೋಟೂರ ಗ್ರಾಮ ಪಂಚಾಯಿತಿ ಸದಸ್ಯ ದಿಲಾವರ ನಾಯಕ ಮುಲ್ಲಾ ಎನ್ನುವವರು ಕೋಟೂರು, ಶಿಂಗನಳ್ಳಿ ಗ್ರಾಮಗಳಿಗೆ ರೋಗಿಗಳು ಆಸ್ಪತ್ರೆಗಳಿಗೆ ತೆರಳಲು ಉಚಿತ ವಾಹನಗಳನ್ನು ಆರಂಭಿಸಿದರು.
ತಮ್ಮ ಸ್ವಂತ ಖರ್ಚಿನಲ್ಲಿ ವಾಹನಗಳನ್ನು ಬಳಸಲು ಕೊಟ್ಟಿದ್ದು, ಕಾರ್ಯಕ್ರಮದ ಸಮಯದಲ್ಲಿ ಕೋಟೂರ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.