ಗಿರೀಶ ಬುಡ್ಡನಗೌಡ್ರ ಯುವ ಘಟಕದ ಉಪಾಧ್ಯಕ್ಷರಾಗಿ ಆಯ್ಕೆ

ದಾವಣಗೆರೆ: ಸಂಘಟನೆ ಹಾಗೂ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಗಿರೀಶ ಬುಡ್ಡನಗೌಡರನ್ನ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಹಾವೇರಿ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಕರ್ನಾಟಕ ರಾಜ್ಯ ವೀರಶೈವ ಅಂಗಾಯತ ಪಂಚಮಸಾಲಿ ಸಂಘವು ತಮ್ಮ ಕ್ರಿಯಾಶೀಲ ಸಂಘಟನಾ ಸಾಮರ್ಥ್ಯ ಹಾಗೂ ಸಮಾಜದ ಬಗ್ಗೆ ಇರುವ ಕಳಕಳ ಸಂಘಟನಾ ಮನೋಭಾವನೆಗಳನ್ನು ಮನಗಂಡು ಹರಿಹರದ ಜಗದ್ಗುರು ಶ್ರೀ ಪೀಠದಲ್ಲಿ ನಡೆದ ರಾಜ್ಯ ಯುವ ಘಟಕದ ಕಾರ್ಯಕಾರಿ ಸಭೆಯಲ್ಲಿ ರಾಜ್ಯಾಧ್ಯಕ್ಷ ನವೀನ್ ಪಾಟೀಲ್ ಆದೇಶದ ಮೇರೆಗೆ ಗಿರೀಶ್.ಆರ್. ಬುಡ್ಡನಗೌಡ್ರ ಅವರನ್ನು ಹಾವೇರಿ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಆಯ್ಕೆಯಾದ ಬುಡ್ಡಣ್ಣನವರ ಅಧಿಕಾರ ಪತ್ರ ಪಡೆಯುವ ಸಮಯದಲ್ಲಿ ಸಿದ್ದಣ್ಣ ಚಿಕ್ಕಬಿದರಿ, ಚಂದ್ರಶೇಖರ ಪೂಜಾರ, ರಾಜು, ನಾಗರಾಜ್ ಹಾಗೂ ಶ್ರೀಗಳು ಉಪಸ್ಥಿತರಿದ್ದರು.