ಪಂಚಮಸಾಲಿ “3ನೇ” ಪೀಠ ಉದಯ: ವೇದಿಕೆಯಲ್ಲಿ ನಿರಾಣಿ ಮದುವೆ ವಾರ್ಷಿಕೋತ್ಸವ….!

ಜಮಖಂಡಿ: ರಾಜ್ಯದಲ್ಲಿ ಹಲವು ರೀತಿಯ ಚರ್ಚೆಯ ನಂತರವೂ ಮೂರನೇಯ ಪಂಚಮಸಾಲಿ ಪೀಠವೂ ಇಂದಿನಿಂದ ಉದಯವಾಗಿದ್ದು, ಶ್ರೀ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ಅಧಿಕೃತವಾಗಿ ಪೀಠಾರೋಹಣ ಮಾಡಿದ್ರು.
ರಾಜ್ಯದಲ್ಲಿ ಈಗಾಗಲೇ ಎರಡು ಪಂಚಮಸಾಲಿ ಮಠದ ಪೀಠಗಳಿದ್ದು, ಅದರಲ್ಲಿಂದು ಮೂರನೇಯ ಪೀಠವನ್ನ ಜಮಖಂಡಿ ತಾಲೂಕಿನ ಆಲಗೂರಿನಲ್ಲಿ ಆರಂಭಿಸಲಾಯಿತು.
ಇಡೀ ಕಾರ್ಯಕ್ರಮದ ಪ್ರಮುಖ ದೃಶ್ಯಾವಳಿಗಳು ಇಲ್ಲಿವೆ ನೋಡಿ..
ಕಾರ್ಯಕ್ರಮದಲ್ಲಿ ಸಚಿವ ಮುರುಗೇಶ ನಿರಾಣಿ ದಂಪತಿಗಳಿಗೆ ಮದುವೆಯ ವಾರ್ಷಿಕೋತ್ಸವದ ಅಂಗವಾಗಿ ಸತ್ಕರಿಸಲಾಯಿತು. ಬಿ.ವೈ.ವಿಜಯೇಂದ್ರ, ವಚನಾನಂದ ಸ್ವಾಮಿಗಳು, ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.