ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರಕ್ಕೆ “10 ಆಮ್ಲಜನಕ ಸಾಂದ್ರಕ”- ಶೆಟ್ಟರ ಫೌಂಡೇಶನ್ ಕೊಡುಗೆ…!

ಹುಬ್ಬಳ್ಳಿ: ಎಸ್.ಎಸ್.ಶೆಟ್ಟರ್ ಫೌಂಡೇಶನ್ ವತಿಯಿಂದ ಹುಬ್ಬಳ್ಳಿ ರಾಷ್ಟೋತ್ಥಾನ ರಕ್ತ ನಿಧಿ ಕೇಂದ್ರಕ್ಕೆ 10 ಲೀಟರ್ ಸಾಮರ್ಥ್ಯದ 10 ಆಮ್ಲಜನಕ ಸಾಂದ್ರಕಗಳನ್ನು ನೀಡಲಾಯಿತು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ತಮ್ಮ ಮಧುರಾ ಕಾಲೋನಿ ಗೃಹ ಕಚೇರಿಯಲ್ಲಿ ಆಮ್ಲಜನಕ ಸಾಂದ್ರಕಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರಕ್ತ ನಿಧಿ ಕೇಂದ್ರದ ದತ್ತ ಮೂರ್ತಿ ಕುಲಕರ್ಣಿ, ಮುಖಂಡರಾದ ಮಲ್ಲಿಕಾರ್ಜುನ ಸಾವುಕಾರ್, ಸಂಕಲ್ಪ ಶೆಟ್ಟರ್, ಸಂತೋಷ ಚವ್ಹಾಣ, ಗೋಪಾಲ ಬದ್ದಿ, ಅವಿನಾಶ್ ಹರಿವಾಣ, ಅಶೋಕ್ ವಾಲ್ಮೀಕಿ, ವಿರೂಪಾಕ್ಷ ರಾಯನಗೌಡರ್, ರಜತ್ ಸಿಂಗ್ ಹಜಾರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.