ಆಯುರ್ವೇದ ಆಸ್ಪತ್ರೆಗೂ ಆಮ್ಲಜನಕ ಸಾಂದ್ರಕ ವಿತರಿಸಿದ ಶಾಸಕ ಮುನೇನಕೊಪ್ಪ…!

ನವಲಗುಂದ: ಕ್ಷೇತ್ರದ ಯಾವುದೇ ಭಾಗದಲ್ಲೂ ಜನರು ಆಮ್ಲಜನಕದ ತೊಂದರೆಯಿಂದ ಬಳಲಬಾರದೆಂಬ ಸದುದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಗೆ ಆಯುರ್ವೇದ ಆಸ್ಪತ್ರೆಗಳಿಗೂ ಆಮ್ಲಜನಕ ಸಾಂದ್ರಕ ವಿತರಣೆ ಮಾಡುವಲ್ಲಿ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಯಶಸ್ವಿಯಾಗಿದ್ದಾರೆ.

ನವಲಗುಂದ ತಾಲೂಕಿನ ಅಮರಗೋಳದಲ್ಲಿನ ಆಯುಷ್ ಆಯುರ್ವೇದ ಆಸ್ಪತ್ರೆಗೆ ಆಮ್ಲಜನಕ ಸಾಂದ್ರಕವನ್ನ ವಿತರಣೆ ಮಾಡಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ- ಉಪಾಧ್ಯಕ್ಷರಿಗೆ ಆಮ್ಲಜನಕ ಸಾಂದ್ರಕವನ್ನ ವಿತರಣೆ ಮಾಡಿದರು.
ಅಳಗವಾಡಿ ಹಾಗೂ ಜಾವೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಆಮ್ಲಜನಕ ಸಾಂದ್ರಕವನ್ನ ವಿತರಣೆ ಮಾಡಲಾಯಿತು. ತಹಶೀಲ್ದಾರ ನವೀನ ಹುಲ್ಲೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.