Onlineದಲ್ಲಿ ಜಾಕೇಟ್ ಕೊಡಿಸದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

ಬೆಳಗಾವಿ: Online ದಲ್ಲಿ ಜಾಕೇಟ್ ಆರ್ಡರ್ ಮಾಡಬೇಡಾ ನಾನೇ ಮಾರುಕಟ್ಟೆಯಲ್ಲಿ ತಂದು ಕೊಡುತ್ತೇನೆ ಎಂದು ತಂದೆ ಹೇಳಿದ್ದನ್ನೇ ತಪ್ಪು ತಿಳಿದುಕೊಂಡುವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಬಸೂರ್ತೆ ಗ್ರಾಮದಲ್ಲಿ ನಡೆದಿದೆ.
ಶುಭಂ ಹನ್ನೂರಕರ ಎಂಬ ವಿದ್ಯಾರ್ಥಿಯೇ ಸಾವಿಗೀಡಾಗಿದ್ದು, ಬಾಲಕ ಹಿಂಡಲಗಾದ ಸೆಂಟ್ ಪೀಟರ್ ಶಾಲೆಯಲ್ಲಿ ಓದುತ್ತಿದ್ದ. ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.