ONLINE ವಂಚನೆ: ಲಂಡನದಲ್ಲಿ ಭಾರತೀಯನ ಬಂಧನ

ಲಂಡನ್: 10ಮಿಲಿಯನ್ ಪೌಂಡ್ ಗಳ ವಂಚನೆ ಹಗರಣವೂ ಸೇರಿದಂತೆ ಆನ್ ಲೈನ್ ವಂಚನೆ ಪಿತೂರಿ ಆರೋಪದ ಮೇಲೆ ಲಂಡನ್ ನ್ಯಾಯಾಲಯ ಭಾರತೀಯ ಪ್ರಜೆಯೂ ಸೇರಿದಂತೆ ಐವರಿಗೆ 11ವರ್ಷ ಸೆರೆವಾಸ ವಿಧಿಸಿದೆ.
ಭಾರತದ ಸತೀಶ ಕೋಟಿನಾದುನಿ (44) ಎಂಬುವವರನ್ನ ಅವರ ಲಂಡನ್ ನಿವಾಸದಲ್ಲಿ ಬಂಧನ ಮಾಡಲಾಗಿತ್ತು. ಸುಳ್ಳು ದಾಖಲೆಗಳಿಂದ ವಂಚನೆ ಮಾಡಲು ಸಂಚು ರೂಪಿಸಿದ್ದಕ್ಕಾಗಿ 5ವರ್ಷ ಹಾಗೂ ಕ್ರಿಮಿನಲ್ ಆಸ್ತಿಯನ್ನ ಪರಿವರ್ತಿಸುವ ಪಿತೂರಿಗಾಗಿ 6ವರ್ಷ ಶಿಕ್ಷೆ ವಿಧಿಸಲಾಗಿದೆ.