ಮುಖ್ಯ ಶಿಕ್ಷಕರು-ಶಿಕ್ಷಕರಿಗೆ ತರಬೇತಿ ನೀಡಲು ಮುಂದಾದ ಸರಕಾರ: ಹೊರಬಿತ್ತು ಅಧಿಕೃತ ಆದೇಶ
1 min readಬೆಂಗಳೂರು: ವಿದ್ಯಾಗಮ ಕಾರ್ಯಕ್ರಮದ ಪರ-ವಿರೋಧದ ನಡುವೆಯೇ ತಾತ್ಕಾಲಿಕವಾಗಿ ಬಂದ್ ಮಾಡಿದ್ದು, ಮತ್ತೆ ಈಗ ದಸರಾ ರಜೆಯನ್ನ ಅಕ್ಟೋಬರ್ 30ವರೆಗೆ ನೀಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ದಸರಾ ರಜೆ ಮುಗಿದು ಮೂರೇ ದಿನಕ್ಕೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ತರಬೇತಿ ನೀಡಲು ಸರಕಾರ ಮುಂದಾಗಿದೆ.
1ನೇ ತರಗತಿಯಿಂದ 8ನೇ ತರಗತಿವರೆಗೆ ಬೋಧಿಸುವ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರುಗಳಿಗೆ ನಿಪ್ಫಾ ಆನ್ ಲೈನ್ ತರಬೇತಿಯನ್ನ ನವೆಂಬರ್ ಮೂರರಿಂದ ಆಯೋಜನೆ ಮಾಡಲಾಗಿದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಶಿಕ್ಷಕರಿಗೆ ಅವರ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ನ್ನ ಮೆಸೇಜ್ ಮೂಲಕ ಕಳಿಸಲಾಗುವುದು. ಈ ತಿಂಗಳ ಅಂತ್ಯದೊಳಗೆ ಈ ಕೋರ್ಸ್ ನ ಲಾಗಿನ್ ಗೆ ಸಂಬಂಧಿಸಿದ ಎಲ್ಲ ತಾಂತ್ರಿಕ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳುವಂತೆಯೂ ಸೂಚನೆ ನೀಡಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಸಿಆರ್ ಪಿ ಹಾಗೂ ಕೆಆರ್ ಪಿಗಳು ಬ್ಲಾಕ್ ಮತ್ತು ಜಿಲ್ಲಾ ಹಂತದ ತಾಂತ್ರಿಕ ಮತ್ತು ಅನುಷ್ಟಾನ ಸಮಿತಿಯ ಶಿಕ್ಷಕರಿಗೆ ಅಗತ್ಯ ಬೆಂಬಲ ನೀಡುವಂತೆ ಆದೇಶ ಮಾಡಲಾಗಿದೆ.