ಆನ್ ಲೈನ್ ಕ್ಲಾಸ್ ಗಾಗಿ ಬೇಕಾಗಿದೆ ಮೊಬೈಲ್: ತರಕಾರಿ ಮಾರಾಟ ಮಾಡುತ್ತಿರೋ ವಿದ್ಯಾರ್ಥಿನಿ…!
1 min readಮೈಸೂರು: ಕೊರೋನಾ ಸಾಂಕ್ರಾಮಿಕ ರೋಗ ಶಿಕ್ಷಣ ವ್ಯವಸ್ಥೆಯನ್ನ ಬುಡಮೇಲು ಮಾಡಿದ ಸಮಯದಲ್ಲಿ ಹಲವರು, ಹಲವು ರೀತಿಯಲ್ಲಿ ಸಮಸ್ಯೆಯನ್ನ ತಂದೊಡ್ಡಿದೆ. ಇದೇ ಕಾರಣದಿಂದ ಆನ್ ಲೈನ್ ಶಿಕ್ಷಣಕ್ಕೆ ಮಹತ್ವ ಬಂದಿದೆ. ಆದರೆ, ಬಡ ವಿದ್ಯಾರ್ಥಿನಿಯೋರ್ವಳು ಸಂಕಷ್ಟ ಪಡುತ್ತಿದ್ದಾಳೆ.
ಮೊಬೈಲ್ ಖರೀದಿಗಾಗಿ ಸೊಪ್ಪು ಮಾರಾಟಕ್ಕೆ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸಾತಗಳ್ಳಿ ವಿದ್ಯಾರ್ಥಿನಿ ಕೀರ್ತಿನಿ ಮುಂದಾಗಿದ್ದಾಳೆ. ಮೊಬೈಲ್ ಕೆಟ್ಟು ಹೋಗಿರುವ ಹಿನ್ನೆಲೆ ಆನ್ ಲೈನ್ ಕ್ಲಾಸ್ ಹಾಜರಾಗಲು ಸಮಸ್ಯೆಯಾಗಿದೆ.
ವೀಡಿಯೋ ಇಲ್ಲಿದೆ ನೋಡಿ..
ಕಳೆದ ನಾಲ್ಕೈದು ದಿನಗಳಿಂದ ಆನ್ ಲೈನ್ ತರಗತಿಗೆ ಗೈರಾದ ವಿದ್ಯಾರ್ಥಿನಿ. ಲ್ಯಾಪ್ ಟಾಪ್ ಇಲ್ಲ, ಟ್ಯಾಬ್ ಇಲ್ಲ ಎಂದು ಸೊಪ್ಪು ಮರಾಟಕ್ಕಿಳಿದ ವಿದ್ಯಾರ್ಥಿನಿ. ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರಗೆ ಸೊಪ್ಪು ತರಕಾರಿ ಮಾರಾಟ. ಬಂದ ಹಣದಲ್ಲಿ ಟ್ಯಾಬ್ ಖರೀದಿಸುವ ಚಿಂತನೆ. ಒಂದೇಡೆ ಅನಾರೋಗ್ಯಕ್ಕೀಡಾಗಿರುವ ತಾಯಿ, ಕೂಲಿ ಕೆಲಸವಿಲ್ಲದ ತಂದೆ. ಸಾತಗಳ್ಳಿಯ ಬಾಡಿಗೆ ಮನೆಯಲ್ಲಿರುವ ಕೀರ್ತಿನಿ ಕುಟುಂಬ. ತರಕಾರಿ , ಸೊಪ್ಪು ಮಾರುತ್ತಲೇ ಬೀದಿಯಲ್ಲೇ ಪುಸ್ತಕ ಹಿಡಿದು ಓದುತ್ತಿರುವ ವಿದ್ಯಾರ್ಥಿನಿ.