ಆನ್ ಲೈನ್ ದಲ್ಲಿ “ಕಬೂಲ್” ಎಂದು ಮದುವೆಯಾದ ಮುಸ್ಲಿಂ ಜೋಡಿ
1 min readಧಾರವಾಡ: ಕೊರೋನಾದಲ್ಲಿ ಅನೇಕ ಮದುವೆ-ಮುಂಜಿವೆ ಕಾರ್ಯಕ್ರಮಗಳು ರದ್ದಾಗಿದ್ದು, ಇಲ್ಲೊಂದು ಜೋಡಿ ಆನ್ ಲೈನ್ ದಲ್ಲಿಯೇ ಕಬೂಲ್ ಹೇಳಿ ಮದುವೆ ಮಾಡಿಕೊಂಡಿದ್ದು, ವಲೀಮಾವನ್ನ ಮುಂದೂಡಲಾಗಿದೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಅಸುಂಡಿ ಮೂಲದ ಧಾರವಾಡ ಆದರ್ಶನಗರದ ನಿವಾಸಿ ಇಮ್ರಾನ್ ನದಾಫ ಎಂಬ ವರನೇ ಆನ್ ಲೈನ್ ದಲ್ಲಿ ಕಬೂಲ್ ಹೇಳಿ ಮದುವೆಯಾಗಿದ್ದಾನೆ. ಕೊಪ್ಪಳದ ಬೈಲ್ದಾರ ಕಾಲನಿ ವಧುವಿನ ಜೊತೆ ಮದುವೆ ನಿಗದಿತ ಸಮಯದಲ್ಲಿ ಜಮಾತ್ ನ ಖಾಜಿ ಸಿಂಕದರ ಅಂಕಲಗಿ ಸಾಕ್ಷಿಯಾಗಿ ತಾಜಮಾಬೇಗಂ ಮತ್ತು ಇಮ್ರಾನ್ ಮದುವೆಯಾಗಿದೆ.
ಸವದತ್ತಿಯಲ್ಲಿ 20ನೇ ತಾರೀಖಿಗೆ ಇಟ್ಟುಕೊಂಡಿದ್ದ ವಲೀಮಾವನ್ನ ರದ್ದುಗೊಳಿಸಿ, ಮುಂದಿನ ದಿನಗಳಲ್ಲಿ ಮಾಡುವುದಾಗಿ ಎರಡು ಮನೆಯವರು ನಿಶ್ಚಯಿಸಿದ್ದಾರೆ.