OLX ನಲ್ಲಿ ಜೆಸಿಬಿ ಮಾರುವುದಾಗಿ ವಂಚಿಸಿದ್ದ ಕೋಗಿಲಗೇರಿಯ ವ್ಯಕ್ತಿ ಬಂಧನ..!
1 min readಹುಬ್ಬಳ್ಳಿ: ಹೆಚ್.ಡಿ.ಬಿ ಪೈನಾನ್ಸ ಸೇಲ್ಸ ಮ್ಯಾನೇಜರ ಎಂದು ಹೇಳಿಕೊಂಡು ಓ.ಎಲ್.ಎಕ್ಸ ದಲ್ಲಿ ಜೆ.ಸಿ.ಬಿ ಮಾರಾಟಕ್ಕಿದೆ ಎಂದು ನಂಬಿಸಿ, ವಂಚನೆ ಮಾಡಿದ್ದ ಆರೋಪಿಯನ್ನ ಹಣದ ಸಮೇತ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನ ಧಾರವಾಡ ತಾಲೂಕಿನ ಕೋಗಿಲಗೇರಿ ಗ್ರಾಮದ ಶಿವಾನಂದ ನಾಗಪ್ಪ ದೂಫದಾಳ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಐದು ಲಕ್ಷ ರೂಪಾಯಿ ಹಾಗೂ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಆರೋಪಿ ಶಿವಾನಂದ, ಪೈನಾನ್ಸದ ಸೇಲ್ಸ್ ಮ್ಯಾನೇಜರನೆಂದು ಪರಿಚಯ ಮಾಡಿಕೊಂಡು ಓ.ಎಲ್.ಎಕ್ಸ ದಲ್ಲಿ ಜೆ.ಸಿ.ಬಿ ಮಾರಾಟಕ್ಕೆಯಿದೆ ಎಂದು ಹೇಳಿ ಜೆ.ಸಿ.ಬಿಯನ್ನು ತೋರಿಸಿ ಇದಕ್ಕೆ 16 ಲಕ್ಷ ರೂಪಾಯಿಗೆ ವ್ಯವಹಾರ ಮುಗಿಸಿ ದಾಖಲಾತಿಗಳನ್ನು ಪಡೆದುಕೊಂಡು ಅಡ್ವಾನ್ಸ 5 ಲಕ್ಷ ಹಣವನ್ನು ಪೈನಾನ್ಸಗೆ ಕಟ್ಟಿದರೆ ಜೆ.ಸಿ.ಬಿ ಯನ್ನು ಬಿಡುಗಡೆಗೊಳಿಸುತ್ತೇನೆ ಎಂದು ಹೇಳಿ ಅಡ್ವಾನ್ಸ 5 ಲಕ್ಷ ರೂಪಾಯಿಗಳನ್ನು ತೆಗದುಕೊಂಡು ಜೆ.ಸಿ.ಬಿಯನ್ನು ಕೊಡಿಸದೇ ಮರಳಿ ಹಣವನ್ನು ಕೊಡದೇ ಮೋಸ ಮಾಡಿದ್ದರ ಬಗ್ಗೆ ದೂರನ್ನ ಪಡೆದಿದ್ದ ಉಪನಗರ ಠಾಣೆ ಪೊಲೀಸರು ಆರೋಪಿಯನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ಡಿಸಿಪಿ(ಕಾವಸು) ರಾಮರಾಜನ್, ಆರ್ ಬಿ ಬಸರಗಿ, ಉಪ ಪೊಲೀಸ್ ಆಯುಕ್ತ (ಅ ವ ಸಂ) ಮಾರ್ಗದರ್ಶನದಲ್ಲಿಉಪನಗರ ಠಾಣೆ ಇನ್ಸಪೆಕ್ಟರ್ ರವಿಚಂದ್ರ.ಡಿ.ಬಿ ಹಾಗೂ ಸಿಬ್ಬಂದಿಗಳು ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.