Posts Slider

Karnataka Voice

Latest Kannada News

ಬೆಡ್ ರೂಂಲ್ಲಿ ಮಲಗಿ ಕಿಡಕಿ ತೆಗೆದ್ರೇ, ಹುಬ್ಬಳ್ಳಿಯಲ್ಲಿ ಏನ್ ಮಾಡ್ತಾರೆ ಗೊತ್ತಾ…!

1 min read
Spread the love

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಕಳ್ಳತನದ ಹಲವು ಸ್ವರೂಪಗಳು ಬೇರೆ ಬೇರೆ ಪ್ರದೇಶದಲ್ಲಿ ಕಾಣತೊಡಗಿವೆ. ಮನೆಗಳನ್ನ ಬೀಗ ಹಾಕಿ ಹೋದವರ ಮನೆಯನ್ನ ಲೂಟಿ ಮಾಡುವುದು ಒಂದು ಕಡೆಯಾದರೇ, ಇನ್ನೊಂದು ಕಡೆ ಮಲಗಿದಾಗಲೇ ಹಣ ಎಗರಿಸುವ ತಂಡಗಳು ಕೆಲಸ ಮಾಡುತ್ತಿವೆ.  ಅಂತಹ ಮತ್ತೊಂದು ಪ್ರಕರಣ ಹಳೇಹುಬ್ಬಳ್ಳಿ ಆನಂದನಗರದ ಚಂದನ ಕಾಲನಿಯಲ್ಲಿ ನಡೆದಿದೆ.

ಕಳ್ಳತನಕ್ಕೆ ಬಳಕೆ ಮಾಡಿದ ಉದ್ದನೆಯ ಕೋಲನ್ನ ಮನೆಯ ಹೊರಗಡೆ ಬಿಟ್ಟು ಹೋಗಿದ್ದಾರೆ

ನರೇಂದ್ರ ಮಂತ್ರಿ ಎಂಬುವವರು ಮನೆಯಲ್ಲಿ ಮಲಗಿದಾಗ, ಬೆಡ್ ರೂಮ್ ಲ್ಲಿ ಹಾಕಿದ್ದ ಪ್ಯಾಂಟನ್ನ ಕಿಡಕಿಯ ಮುಖಾಂತರ ಹೊರಗೆ ತೆಗೆದು ಅದರಲ್ಲಿದ್ದ 28 ಸಾವಿರ ರೂಪಾಯಿ ನಗದನ್ನ ಲೂಟಿ ಮಾಡಿ, ಪ್ಯಾಂಟನ್ನ ಮನೆ ಮುಂದೆ ಬಿಟ್ಟು ಹೋಗಿದ್ದಾರೆ. ಅದರಲ್ಲಿದ್ದ ಹಲವು ಬೀಗದ ಕೈಗಳನ್ನ ತೆಗೆದುಕೊಂಡು ಹೋಗಲಾಗಿದೆ.

ಹೊರಗೆ ಬಿಟ್ಟು ಹೋಗಿರುವ ಪ್ಯಾಂಟ್

ಕಿಡಕಿಯಿಂದ ಸುಮಾರು 10 ಪೂಟು ಅಂತರದಲ್ಲಿ ಸೆಲ್ಪಿಗೆ ಹಾಕಿದ್ದ ಪ್ಯಾಂಟನ್ನ ಉದ್ದನೆಯ ಕೋಲಿನಿಂದ ತೆಗೆದು ಕಳ್ಳತನ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಕಳ್ಳತನಕ್ಕೆ ಬಳಕೆ ಮಾಡಿದ ಉದ್ದನೆಯ ಕೋಲನ್ನ ಮನೆಯ ಹೊರಗಡೆ ಬಿಟ್ಟು ಹೋಗಿದ್ದಾರೆ. ಘಟನೆಯ ಮಾಹಿತಿ ದೊರೆತ ತಕ್ಷಣವೇ ಪೊಲೀಸರಿಗೆ ಮಾಹಿತಿಯನ್ನ ನೀಡಿರುವ ನರೇಂದ್ರ ಮಂತ್ರಿ, ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಸುತ್ತಲೂ ಇರುವ ಸಿಸಿಟಿವಿ ಕ್ಯಾಮರಾಗಳ ಬಗ್ಗೆ ಮಾಹಿತಿಯನ್ನ ಪಡೆದು, ಆರೋಪಿಗಳ ಬಗ್ಗೆ ಜಾಲ ಬೀಸಲಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed