ಆ ವೀಡಿಯೋವನ್ನ ಮಾಡಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರ ಮ್ಯಾಲೆ ಹಾಕಿದ್ದು ಯಾರೂ…!?
1 min readಹುಬ್ಬಳ್ಳಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಹಲವು ಘಟನಾವಳಿಗಳನ್ನ ಕೆಲವರು ಉದ್ದೇಶಪೂರ್ವಕವಾಗಿ ಚಿತ್ರೀಕರಣ ಮಾಡಿ, ಮಾಡದವರ ಹೆಸರನ್ನ ತಳಕು ಹಾಕಿ ಹರಿ ಬಿಡುವ ಪ್ರಯತ್ನಕ್ಕೆ ಮುಂದಾಗುತ್ತಿದ್ದು, ಅಂಥವರನ್ನ ಪೊಲೀಸರು ಇಂದು ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದನ್ನ ಹಳೇಹುಬ್ಬಳ್ಳಿ ಠಾಣೆಯ ಸಿಬ್ಬಂದಿಯ ಹೆಸರನ್ನ ಹಾಕಿ, ‘ಅವರೇ ಇದನ್ನ ಮಾಡಿದ್ದು’ ಎಂದು ಬಿಂಬಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ.
ಹಿರಿಯ ಅಧಿಕಾರಿಗಳು ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಿದ್ದು, ಇದರ ಹಿಂದಿರುವ ‘ಡ್ರಾಮಾ’ ಕಂಡು ಹಿಡಿಯಲು ಮುಂದಾಗಿದ್ದು, ವೈರಲ್ ಮಾಡಿರುವ ವ್ಯಕ್ತಿಯನ್ನ ಇಂದು ವಶಕ್ಕೆ ಪಡೆದು, ವಿಚಾರಣೆ ಮಾಡಲಿದ್ದಾರೆಂದು ಗೊತ್ತಾಗಿದೆ.
ಕೊರೋನಾ ಮಹಾಮಾರಿಯ ಅಟ್ಟಹಾಸದಲ್ಲೂ ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪೊಲೀಸರ ಮೇಲೆ, ಇಲ್ಲದ ವಿಷಯಗಳಿಗೆ ಹೆಸರು ಹಾಕಿ ಮಾನಸಿಕವಾಗಿ ತೊಂದರೆ ಕೊಡುವುದನ್ನ ತಪ್ಪಿಸುವ ಉದ್ದೇಶದಿಂದಲೇ, ಹಿರಿಯ ಅಧಿಕಾರಿಗಳು ತನಿಖೆ ಮಾಡಲು ಮುಂದಾಗಿದ್ದಾರೆಂದು ಗೊತ್ತಾಗಿದೆ.
ಯಾವುದೇ ವೀಡಿಯೋಗಳಿದ್ದರೂ, ಅವುಗಳ ಸತ್ಯಾಸತ್ಯತೆಯನ್ನ ಅರಿತುಕೊಂಡು ಮಾಡಿದವರ ಬಗ್ಗೆ ನಿಖರವಾದ ಮಾಹಿತಿ ಇದ್ದರೇ, ಮಾತ್ರ ವೈರಲ್ ಮಾಡುವುದು ಸಹಜ. ಆದರೆ, ಹಳೇಹುಬ್ಬಳ್ಳಿ ಠಾಣೆ ಪೊಲೀಸರನ್ನ ಟಾರ್ಗೆಟ್ ಮಾಡುತ್ತಿರುವ ಹಿಂದಿನ ಅಸಹಜ ಉದ್ದೇಶ ಹೊರಬರಬೇಕಿದೆ.