ಹಳೇಹುಬ್ಬಳ್ಳಿ ಠಾಣೆ ಪೊಲೀಸರಿಂದ “ಗಾಂಧಿಗಿರಿ”-

ಹುಬ್ಬಳ್ಳಿ: ಮನಸ್ಸು ಮನಸ್ಸುಗಳ ನಡುವಿನ ಬಿರುಕನ್ನ ಮನಸ್ಸಿಂದಲೇ ಸರಿ ಮಾಡಬೇಕೆಂಬ ಹಂಬಲದಿಂದ ಪೊಲೀಸರು ಗಾಂಧಿಗಿರಿ ಇಳಿದಿದ್ದು, ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಸಾರ್ವಜನಿಕ ಮನ್ನಣೆಗೆ ಪಾತ್ರವಾಗಿದ್ದಾರೆ.
ಈ ವಿಶೇಷ ವೀಡಿಯೋವನ್ನ ಮೊದಲು ನೋಡಿಬಿಡಿ…
ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ 52 ನೇ ಬೀಟ್‌ನಲ್ಲಿ ಮನುಷ್ಯ ಕಾಳಜಿಯ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಬೀಟ್‌ನ ಹೆಡ್‌ಕಾನ್ಸಟೇಬಲ್ ಮೆಹಬೂಬ ನದಾಫ ಅವರ ಆಸಕ್ತಿಯಿಂದ ಇಂತಹದ್ದನ್ನ ಯೋಚಿಸಲಾಗಿತ್ತು.
ಇನ್ಸಪೆಕ್ಟರ್ ಸುರೇಶ ಯಳ್ಳೂರ ಅವರು ಮೊದಲಿಂದಲೂ ಸಾರ್ವಜನಿಕರ ನೆಮ್ಮದಿಯನ್ನ ಬಯಸಿದವರೇ. ಹಾಗಾಗಿಯೇ ಸಾರ್ವಜನಿಕವಾಗಿ ಅವರ ಮಾತುಗಳು ಎಲ್ಲರ ಗಮನ ಸೆಳೆಯಿತು.
ಮಾಜಿ ಸಂಸದ ಐ.ಜಿ.ಸನದಿಯವರ ಉಪಸ್ಥಿತಿ ಕಾರ್ಯಕ್ರಮದ ಮೆರಗನ್ನ ಹೆಚ್ಚಿಸಿತ್ತು. ಹಿಂದೂ-ಮುಸ್ಲಿಂ ಬಾಯ್.. ಬಾಯ್.. ಎನ್ನುವುದನ್ನ ಮತ್ತಷ್ಟು ಗಟ್ಟಿಯಾಗಿಸಲು ನಡೆಸಿದ ಯತ್ನ ಸಫಲವಾಯಿತು.
ಹಳೇಹುಬ್ಬಳ್ಳಿ ಠಾಣೆಯ ಪೊಲೀಸರ ಈ ಕಾರ್ಯ ಪ್ರತಿಯೊಂದು ಠಾಣೆಗಳಲ್ಲಿಯೂ ನಡೆಯಬೇಕಿದೆ.