ಹಳೇಹುಬ್ಬಳ್ಳಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ “ಟರ್ಪೆಂಟೇಲ್ ಕುಡಿದು” ಆತ್ಮಹತ್ಯೆ ಯತ್ನ….!!??
1 min readಹುಬ್ಬಳ್ಳಿ: ಹಳೇಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಿಂದ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಆರೋಪಿಯೋರ್ವ ಪೊಲೀಸ್ ಠಾಣೆಯಲ್ಲೇ ಟರ್ಪೆಂಟೇಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಎರಡು ದಿನಗಳ ಹಿಂದೆ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಮೊಹ್ಮದ ಆರೀಫ್ (ಮೊಹ್ಮದ ಸಾಧೀಕ್) ಎಂಬುವವನೇ ಹೀಗೆ ಮಾಡಿಕೊಂಡಿದ್ದನೆಂದು ಹೇಳಲಾಗಿದ್ದು, ಚಿಕಿತ್ಸೆಗಾಗಿ ಆತನನ್ನ ಕಿಮ್ಸಗೆ ದಾಖಲು ಮಾಡಲಾಗಿದೆ.
ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ರಾತ್ರಿ ಸಮಯದಲ್ಲಿ ಆರೋಪಿ ಟರ್ಪೆಂಟೇಲ್ ಕೇಳಿದ್ದಾನೆ. ಯಾವುದೋ ಗಾಯಕ್ಕೆ ಇರಬಹುದೆಂದು ಪೊಲೀಸರು ತಂದು ಕೊಟ್ಟಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅದನ್ನ ಕುಡಿದಿದ್ದಾನೆ, ಅಷ್ಟರಲ್ಲಿಯೇ ಎದುರಿಗೆ ಇದ್ದ ಮತ್ತೊಬ್ಬ ಆರೋಪಿಯೂ ಆಗಿರುವ ಎಐಎಂಐಎಂ ಮುಖಂಡ ಅದನ್ನ (ಬಾಟಲಿ) ಕೆಳಗೆ ಹೊಡೆದು ಬೀಳಿಸಿದ್ದಾರೆ. ಆದರೆ, ಟರ್ಪೆಂಟೇಲ್ ಕುಡಿದ ಆರೋಪಿ ಪ್ರಜ್ಞೆತಪ್ಪಿ ಬಿದ್ದು ಹೈಡ್ರಾಮಾ ಕ್ರಿಯೇಟ್ ಆಗಿದೆ ಎಂದು ಹೇಳಲಾಗಿದೆ.
ಕಿಮ್ಸನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಈ ಟರ್ಪೆಂಟೇಲ್ ಕುಡಿಯುವ ಡ್ರಾಮಾ ಯಾವ ಕಾರಣಕ್ಕೆ ಆಗಿದೆ ಎಂಬುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಘಟನೆ ನಡೆದಿದ್ದು, ಪ್ರಕರಣ ಬೇರೆಯದ್ದೆ ಮಜಲು ಪಡೆದುಕೊಂಡಿದೆ.
ಪ್ರಕರಣವನ್ನ ಗಂಭೀರವಾಗಿ ಹಿರಿಯ ಅಧಿಕಾರಿಗಳು ತೆಗೆದುಕೊಂಡಿದ್ದಾರೆಂದು ಹೇಳಲಾಗಿದ್ದು, ಹಲವರ ತಲೆದಂಡವಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.