Posts Slider

Karnataka Voice

Latest Kannada News

“ಮತ” ಮೀರಿದ “ಪ್ರೇಮ”- ಹಳೇಹುಬ್ಬಳ್ಳಿ ಠಾಣೆಯೆದುರು ನೂರಾರು ಜನ…!

1 min read
Spread the love

ಹುಬ್ಬಳ್ಳಿ: ಪ್ರೀತಿ ಮಾಡುವಾಗ ಯಾವುದೇ ಮತಗಿಂತ ಮನಸ್ಸು ದೊಡ್ಡದು ಎಂದು ತಿಳಿದುಕೊಂಡು ಊರು ಬಿಟ್ಟು ಹೋಗಿದ್ದ ಪ್ರಕರಣವೀಗ, ಬೇರೆಯದ್ದೆ ಸ್ವರೂಪ ಪಡೆಯುವ ಲಕ್ಷಣಗಳು ಕಂಡು ಬಂದಿದ್ದು, ಅದೇ ಕಾರಣಕ್ಕೆ ಹಳೇಹುಬ್ಬಳ್ಳಿ ಠಾಣೆಯೆದುರು ನೂರಾರು ಜನರು ಜಮಾಯಿಸಿದ್ದಾರೆ.

ಕಳೆದ 2 ದಿನಗಳ ಹಿಂದೆ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 20 ವರ್ಷದ ಯುವತಿಯೋರ್ವಳು ಕಾಣೆಯಾಗಿದ್ದಳೆಂದು ದೂರು ದಾಖಲಾಗಿತ್ತು. ಆದರೆ, ಆ ಯುವತಿ ಕಾಣೆಯಾಗಿದ್ದರ ಹಿಂದೆ ಪ್ರೇಮ ಅಡಗಿದೆ ಎಂದು ಪೊಲೀಸರು ಪತ್ತೆ ಹಚ್ಚಿ, ಇಬ್ಬರನ್ನೂ ಕರೆದುಕೊಂಡು ಬಂದಿದ್ದಾರೆ.

ಈ ವಿಷಯ ಗೊತ್ತಾಗಿದ್ದೆ ತಡ ಹಳೇಹುಬ್ಬಳ್ಳಿ ಠಾಣೆಗೆ ನೂರಾರು ಜನರು ಬಂದಿದ್ದು, ಪ್ರೀತಿಸಿದ್ದರ ಬಗ್ಗೆ ಹಲವು ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಮನಸ್ಸುಗಳ ವಿಷಯವೀಗ ಬೀದಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಾ ಠಾಣೆಗೆ ಆಗಮಿಸಿದ್ದು, ಎರಡು ಮತದ ಹಿರಿಯರನ್ನ ಕರೆದು ಮಾತುಕತೆ ನಡೆಸುತ್ತಿದ್ದಾರೆ. ಹಳೇಹುಬ್ಬಳ್ಳಿ ಠಾಣೆ ಎದುರು ಮಾತ್ರ ಬಿಸಿ ವಾತಾವರಣ ಕಂಡು ಬರುತ್ತಿದೆ.


Spread the love

Leave a Reply

Your email address will not be published. Required fields are marked *

You may have missed