ಹಳೇಹುಬ್ಬಳ್ಳಿಯ ಯುವಕ “ಕೊಳಗೇರಿ ಕ್ರಾಸ್”ನಲ್ಲಿ ದುರ್ಮರಣ..

ಕುಮಟಾ: ತಾಲೂಕಿನ ಸಂತೆಗುಳಿಯ ಕೊಳೆಗೇರ್ ಕ್ರಾಸ್ ಬಳಿಯ ಹಳ್ಳದಲ್ಲಿ ಸ್ನಾನ ಮಾಡಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟದ್ದಾನೆ.

ಹಳೇಹುಬ್ಬಳ್ಳಿಯ ಟಿಪ್ಪುನಗರ ನಿವಾಸಿ ಶಾಬಾಜ್ ಮಹಮ್ಮದಹನೀಫ್ ತೋಟಗೇರ ಮೃತಪಟ್ಟ ಯುವಕ.
ಮೃತ ಶಾಬಾಜ್ ತಾಲೂಕಿನ ಸಂತೆಗುಳಿಯ ಮನೆಯೊಂದರಲ್ಲಿ ಪೇಂಟಿಂಗ್ ಕೆಲಸಕ್ಕೆಂದು ತಂದೆ ಹಾಗೂ ಸಹೋದರನ ಜೊತೆ ಹುಬ್ಬಳ್ಳಿಯಿಂದ ಬಂದಿದ್ದ. ಸಹೋದರ ಮಲ್ಲಿಕ್ ರಿಹಾನ್ ಜೊತೆ ಸಂತೆಗುಳಿಯ ಕೊಳೆಗೇರ ಕ್ರಾಸ್ ಸಮೀಪದ ಹಳ್ಳದಲ್ಲಿ ಸ್ನಾನ ಮಾಡುತ್ತಿರುವ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.