Posts Slider

Karnataka Voice

Latest Kannada News

ಕೆಲಸವಿಲ್ಲದ ‘ಡಾಕ್ಟರ್- ಹೆಂಡ್ತಿ’ ಅಧಿಕಾರ ದುರ್ಭಳಕೆ: ನಿವೃತ್ತ ಅಧಿಕಾರಿಯೇ ‘ಕಿಂಗ್ ಪಿನ್’…!

1 min read
Spread the love

ಧಾರವಾಡ: ನಗರದ ಓರ್ವ ಮಹಿಳಾ ಅಧಿಕಾರಿಯ ಗಂಡ ತಾನೊಬ್ಬ ಮಹಾನುಭಾವ ಡಾಕ್ಟರ್ ಎಂದು ಹೇಳಿಕೊಳ್ಳುತ್ತಲೇ, ಹೆಂಡತಿಯ ಅಧಿಕಾರ ಚಲಲಾಯಿಸುತ್ತ ಕೂತಿರುವುದು ಸಾಕಷ್ಟು ಜನರಲ್ಲಿ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕವಾಯ್ಸ್.ಕಾಂ ಮಹಿಳಾ ಅಧಿಕಾರಿ ಮತ್ತು ಗಂಡನ ಬಗ್ಗೆ ಸೂಕ್ಷ್ಮವಾಗಿ ಬರೆದ ಕೆಲವೇ ನಿಮಿಷಗಳಲ್ಲಿ ಹಲವರು ಹಲವು ರೀತಿಯ ವಿವರವನ್ನ ನೀಡುತ್ತಿದ್ದಾರೆ. ಅದರಲ್ಲಿ ಕೆಲವುಗಳನ್ನ ನಿಮ್ಮ ಮುಂದಿಡುತ್ತಿದ್ದೇವೆ.

ಈ ಮಹಿಳಾ ಅಧಿಕಾರಿಯ ಹಿಂದೆ ಓರ್ವ ನಿವೃತ್ತ ಅಧಿಕಾರಿಯಿದ್ದಾರಂತೆ. ಅವರು ತಮ್ಮ ಸರ್ವಿಸ್ ಮುಗಿಯುವವರೆಗೂ ಹಣಕ್ಕಾಗಿ ‘ಬಾಯಿ’ತೆಗೆದುಕೊಂಡೇ ರಿಟಾಯರ್ಡ್ ಆಗಿದ್ದಾರಂತೆ. ಇದೀಗ ಈ ನಿವೃತ್ತ ಅಧಿಕಾರಿಯ ಮಾತೇ ಮಹಿಳಾ ಅಧಿಕಾರಿಗೆ ವೇದವಾಕ್ಯವಂತೆ.

ಕೆಲವು ದಿನಗಳ ಹಿಂದೆ ನಡೆದ ತನಿಖೆಯೊಂದರಲ್ಲಿ ಮಹಿಳಾ ಅಧಿಕಾರಿಯ ಕೆಲಸವಿಲ್ಲದ ಪತಿ, ಮುಂದಿದ್ದವರಿಗೆ ಫರ್ಮಾನು ಹೊರಡಿಸುತ್ತಿದ್ದರಂತೆ. ಅಷ್ಟೇ ಅಲ್ಲ, ಬಹುತೇಕ ಸಮಯವನ್ನ ಮಹಿಳಾ ಅಧಿಕಾರಿಯ ಪತಿ, ಪತ್ನಿಯ ಕಚೇರಿ ಮತ್ತೂ ಮಹಿಳಾ ಅಧಿಕಾರಿಗೆ ಸಂಬಂಧಿಸಿದ ಇಲಾಖೆಯ ವಸತಿ ಗೃಹದಲ್ಲಿಯೇ ಸಮಯ ಕಳೆಯುತ್ತಾರಂತೆ.

ಇಂತವರಿಂದ ಧಾರವಾಡ ಉದ್ಧಾರವಾದಂತೆ. ಮತ್ತಷ್ಟು ಮಾಹಿತಿಗಳು ಸಾಕ್ಷ್ಯ ಸಮೇತ ಕೊಡಲಿದೆ ಕರ್ನಾಟಕವಾಯ್ಸ್.ಕಾಂ.


Spread the love

Leave a Reply

Your email address will not be published. Required fields are marked *

You may have missed