ಧಾರವಾಡದಲ್ಲಿ “ಖಡಕ್” ಎನಿಸಿಕೊಂಡಿದ್ದ ಮಹಿಳಾಧಿಕಾರಿಯ ಗಂಡನೇ ಕಚೇರಿಯಲ್ಲಿ ಬಾಸ್….!

ಧಾರವಾಡ: ವಿದ್ಯಾನಗರಿಯಲ್ಲಿ ತೋರಿಸುವ ಮುಖ ಮತ್ತೂ ಇರೋ ಮುಖಗಳು ಬೇರೆ ಬೇರೆಯಾಗೇ ಇರುತ್ತವೆ. ಅದಕ್ಕೊಂದು ತಾಜಾ ನಿದರ್ಶನವೊಂದು ‘ಶಾಣ್ಯಾ’ರ ಊರಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಆ ಮುಖವಾಡ ಕಳುಚುವ ಸಣ್ಣ ಪ್ರಯತ್ನವನ್ನ ಕರ್ನಾಟಕವಾಯ್ಸ್.ಕಾಂ ಮಾಡಲು ಮುಂದಾಗಿದೆ.

ಧಾರವಾಡ ನಗರದಲ್ಲಿರೋ ಓರ್ವ ಮಹಿಳಾ ಅಧಿಕಾರಿ ಸೋಷಿಯಲ್ ಮೀಡಿಯಾದಲ್ಲಿ ಕೀಳು ಪ್ರಚಾರ ಪಡೆದುಕೊಂಡು, ತಾನು ದಕ್ಷಳು ಎಂದು ತೋರಿಸುವ ಪ್ರಯತ್ನವನ್ನ ಮಾಡುತ್ತಲೇ ಬಂದಿದ್ದಾರೆ. ಆದರೆ, ಅಸಲಿಯತ್ತು ಬೇರೆಯದ್ದೆ ಇದೆ.
ನಗರದಲ್ಲಿ ಮೊದ ಮೊದಲು ಬಹುತೇಕರು ಖಡಕ್ ಅಧಿಕಾರಿ ಬಂದ್ರು ಎಂದು ಮಾತನಾಡಿಕೊಳ್ಳುತ್ತಿದ್ದರು. ಅದೇ ಸಮಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನ ತಾವು ಪ್ರಚಾರ ಮಾಡಿಸಿಕೊಂಡಿದ್ದು, ಬಿಟ್ಟರೇ ಮಹಿಳಾ ಅಧಿಕಾರಿ ಮಾಡಿದ ಒಂದೇ ಒಂದು ಕೆಲಸ ಜನ ಮೆಚ್ಚುವಂತಹದ್ದಲ್ಲ.
ಇತ್ತೀಚಿನ ದಿನಗಳಲ್ಲಿ ತಾನಿರುವ ಕಚೇರಿಯಲ್ಲಿ ಗಂಡನಾಟ ನಡೆಸಲು ಕೂಡಾ ಅನುವು ಮಾಡಿಕೊಡಲಾಗಿದೆ ಎಂಬುದು “ಆ” ಇಲಾಖೆಗೆ ಗೊತ್ತಿರುವ ಸಂಗತಿಯಾಗಿದೆ. ಕೆಲವು ಬಾರಿ “ಕಚೇರಿಗೆ ಗಂಡನೇ ಬಾಸ್” ಎಂಬಂತೆ ನಡೆದುಕೊಳ್ಳುತ್ತಿರುವುದು ರಹಸ್ಯವಾಗಿ ಉಳಿದಿಲ್ಲ.
ಈ ಮಾಹಿತಿಯಲ್ಲಿ ಸಂಬಂಧಿಸಿದ ಇಲಾಖೆಯ ಹೆಸರು ಮತ್ತು ಮಹಿಳಾ ಅಧಿಕಾರಿಯ ಹೆಸರನ್ನ ಪ್ರಸ್ತಾಪ ಮಾಡಿಲ್ಲ. ಏಕೆಂದರೆ, ಇದೊಂದು ಬಾರಿ ಎಚ್ಚರಿಕೆ ನೀಡಿ, ನಂತರ ಸಾಕ್ಷಿ ಸಮೇತ ಸುದ್ದಿ ಹೊರಹಾಕಿದರೇ ಒಳ್ಳೆಯದಲ್ಲವೇ..