ಯಾರೂ ನೀ.. ಆತಂಕ ಮೂಡಿಸಿದ್ದ ಆಗುಂತಕ: ವಾಣಿಜ್ಯನಗರಿಯಲ್ಲಿ ಕಂಡು ಬಂದವ ಡಿಸಿಪಿ ಮುಂದೆ ಹಾಜರು..

ಹುಬ್ಬಳ್ಳಿ: ಆತ ಹೊತ್ತಲ್ಲದ ಹೊತ್ತಲ್ಲ ಸಂಶಯವಾಗಿ ಅವರಿವರ ನೋಡುತ್ತ ಸಮಯವನ್ನ ಕಳೆಯತೊಡಗಿದ. ಮಹಾನಗರ ಪಾಲಿಕೆಯ ಬಳಿ ಕೆಲವೊತ್ತು ಕೂತ. ಅಲ್ಲಿಂದ ರೇಲ್ವೆ ನಿಲ್ದಾಣದ ಬಳಿ ಹೋದ. ಮತ್ತೆ ಅಂಬೇಡ್ಕರ ವೃತ್ತದ ಬಳಿ ಬಂದ, ಮತ್ತದೇ ರೇಲ್ವೆ ನಿಲ್ದಾಣ.. ಹೀಗೆ ಅಲೆದಾಡುತ್ತಿದ್ದವನ ಹೆಜ್ಜೆಗಳು ಸಂಶಯಗಳನ್ನ ಸೃಷ್ಟಿ ಮಾಡಿದ್ದವು.
ಅಪರಿಚಿತ ವ್ಯಕ್ತಿಯ ಚಲನವಲನ ಗಮನಿಸಿದ ಪೊಲೀಸರು ತಕ್ಷಣವೇ ಆತನನ್ನ ವಿಚಾರಣೆಗೆ ಒಳಪಡಿಸಿದರು. ಆಗ, ಈತನ ಅಸಲಿಯತ್ತು ಹೊರಗೆ ಬಂದಿದೆ. ಅಷ್ಟೇ ಅಲ್ಲ, ಈತನ ಅಲೆದಾಟಕ್ಕೆ ಕಾರಣವಾಗಿದ್ದು, ದೂರದ ಓಡಿಸ್ಸಾದಿಂದ ಬಂದಿರೋದು.
ಶಿವಂ ಮುಂಡಾ ಎಂಬ ಈ ವ್ಯಕ್ತಿಯು ಗೋವಾದಿಂದ ನೇರವಾಗಿ ಹುಬ್ಬಳ್ಳಿಗೆ ಬಂದಿದ್ದ. ಮುಂದೆ ಹೋಗಲು ತೊಂದರೆಯಾಗಿ ಪದೇ ಪದೇ ರೇಲ್ವೆ ನಿಲ್ದಾಣದ ಬಳಿ ಹೋಗುವುದು, ಬರುವುದು ಮಾಡತೊಡಗಿದ್ದ. ಹಾಗಾಗಿಯೇ, ಆತನನ್ನ ಡಿಸಿಪಿ ಮುಂದೆ ಹಾಜರುಪಡಿಸಲಾಯಿತು.
ಸುಮಾರು ಸಮಯದವರೆಗೆ ಶಿವಂ ಮುಂಡಾ ಎಂಬ ವ್ಯಕ್ತಿಯನ್ನ ವಿಚಾರಣೆಗೆ ಒಳಪಡಿಸಲಾಯಿತು. ಓಡಿಸ್ಸಾದ ಕುಟುಂಬದವರೊಂದಿಗೆ ಮಾತನಾಡಿ, ಈತನ ಬಗ್ಗೆ ಖಚಿತಪಡಿಸಿಕೊಂಡು ಕಳಿಸಿಕೊಡಲಾಗಿದೆ.