ಸಂಸ್ಥಾಪಕ ದಿನಾಚರಣೆ: ಸಾರಿಗೆ ಇಲಾಖೆಯ ಯಡವಟ್ಟು

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ಸಂಸ್ಥಾಪಕ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಸಾರಿಗೆ ಇಲಾಖೆಯ ಅಧಿಕಾರಿಗಳ ಎಡವಟ್ಟು ಮಾಡಿರುವ ಪ್ರಸಂಗ ನಡೆದಿದೆ.
ಹುಬ್ಬಳ್ಳಿಯ ವಾಯುವ್ಯ ರಸ್ತೆಯ ಸಾರಿಗೆ ಸಂಸ್ಥೆ ಸಂಸ್ಥಾಪಕ ದಿನಾಚರಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಅವಧಿ ಮೀರಿದ ನೀರಿನ ಬಾಟಲ್ ಗಳನ್ನ ಕೊಟ್ಟು ಮುಜುಗರಕ್ಕೆ ಒಳಗಾದ ಅಧಿಕಾರಿಗಳು.
ಅವಧಿ ಮುಗಿದು ಎರಡು ತಿಂಗಳು ಆಗಿದ್ದ ಕುಡಿಯುವ ನೀರಿನ ಬಾಟಲಿಗಳನ್ನೇ ಕಾರ್ಯಕ್ರಮದಲ್ಲಿ ವಿತರಿಸಿದ ಅಧಿಕಾರಿಗಳು. ಇದೆಲ್ಲ ಗೊತ್ತಿದ್ದರೂ ಕೂಡಾ ಇದಕ್ಕೆ ಗಮನಹರಿಸದೆ ಬೇಜಾವಾಬ್ದಾರಿ ತೋರಿದ ಅಧಿಕಾರಿಗಳು.