ಹಳೇ ಬಸ್ ನಿಲ್ದಾಣದಲ್ಲಿ ಸಡಗರದ ಸ್ವಾತಂತ್ರ್ಯೋತ್ಸವ: ಸಿಹಿ ಹಂಚಿ ಸಂಭ್ರಮಿಸಿದ ಸಿಬ್ಬಂದಿ
ಹುಬ್ಬಳ್ಳಿ: ಹಳೇ ಬಸ್ ನಿಲ್ದಾಣದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಧಿಕಾರಿಗಳು ಹಾಗೂ ವಾಯುವ್ಯ ರಸ್ತೆ ಸಾರಿಗೆ ಸಿಬ್ಬಂದಿಗಳು ಸಡಗರದಿಂದ ಆಚರಿಸಿದರು.
ನಿಲ್ದಾಣಾಧಿಕಾರಿ ಜಿ.ಬಿ.ಕೋಟೂರ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಸಾರಿಗೆ ನಿಯಂತ್ರಕ ರಮೇಶ್ ಪಡತರೆ, ಡಿ.ಎಚ್.ಬಂಡಿವಡ್ಡರ, ವಿ.ಎಸ್ ಬನ್ನಿಕೊಪ್ಪ, ಸಿ.ಆರ್.ದೊಡ್ಡಮನಿ, ಸಿದ್ದು ಹುಬ್ಬಳ್ಳಿ, ಬಾಲು ಬಟಕುರ್ಕಿ, ಎಂ.ಎಸ್. ಹಿರೇಮಠ, ವಿ.ಎಚ್. ಭರಮಗೌಡರ ಉಪಸ್ಥಿತರಿದ್ದರು.