ಸಾರಿಗೆ ನೌಕರರ ಕಮಾಲ್: ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ
ಹುಬ್ಬಳ್ಳಿ: ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂಲಕ ಹೊರಡುವ ಬಹುತೇಕ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಇದಕ್ಕೆ ಪ್ರತಿ ನೌಕರರ ಕಾರ್ಯಕ್ಷಮತೆ ಕಾರಣವಾಗಿದೆ.
ಕೊರೋನಾ ವೈರಸ್ ಹಾವಳಿಯಿಂದ ಬಹುತೇಕ ವ್ಯವಸ್ಥೆ ಕಂಗಾಲಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ವಾಯುವ್ಯ ರಸ್ತೆ ಸಾರಿಗೆ ವಿಭಾಗದಲ್ಲಿಯೂ ಪ್ರಯಾಣಿಕರ ಸಂಖ್ಯೆ ತೀರಾ ಇಳಿಮುಖವಾಗಿತ್ತು. ಆದರೆ, ಪ್ರತಿಯೊಬ್ಬರು ಕೂಡಿಕೊಂಡು ಪ್ರಯಾಣಿಕರ ಆರಾಮದಾಯಕ ಸೇವೆ ಒದಗಿಸುವ ಭರವಸೆ ನೀಡುತ್ತಿರುವುದರಿಂದ ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ.
ಸಾರಿಗೆ ಸಂಸ್ಥೆಯ ಬಸ್ ಗಳನ್ನ ಪ್ರತಿದಿನವೂ ಸ್ಯಾನಿಟೈಸರ್ ಮಾಡುವ ಮೂಲಕ ಪ್ರಯಾಣಿಕರ ಹಿತ ಕಾಪಾಡಲಾಗುತ್ತಿದೆ. ಬಸ್ ನಿಲ್ದಾಣದೊಳಗೆ ಬರುವ ಪ್ರತಿಯೊಬ್ಬರ ಜ್ವರ ತಪಾಸಣೆ ಮಾಡಿ, ಸ್ಯಾನಿಟೈಸರ್ ಕೈಗೆ ಹಾಕಿ ಒಳಗೆ ಬಿಡಲಾಗುತ್ತಿದೆ. ಇದೇಲ್ಲವನ್ನೂ ಸಿಬ್ಬಂದಿಗಳೇ ಆಸಕ್ತಿಯಿಂದ ಮಾಡುತ್ತಿರುವುದು ಪ್ರಯಾಣಿಕರಲ್ಲಿ ಮತ್ತಷ್ಟು ಭರವಸೆ ಮೂಡಿದೆ.
ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಈ ಕಾರ್ಯ ಶ್ಲಾಘನೀಯವಾಗಿದೆ.