Posts Slider

Karnataka Voice

Latest Kannada News

ವಲಸೆ ಕಾರ್ಮಿಕರನ್ನು ಸ್ವಂತ ಊರುಗಳಿಗೆ ತಲುಪಿಸಲು ಶ್ರಮ:  ಸಾರಿಗೆ ಸಂಸ್ಥೆಯ ಚಾಲಕ-ನಿರ್ವಾಹಕರಿಗೆ ಹೂಮಳೆಗರೆದು ಅಭಿನಂದನೆ

1 min read
Spread the love

ಹುಬ್ಬಳ್ಳಿ: ಲಾಕ್ ಡೌನ್ ನಿಂದಾಗಿ ಪರ ಊರುಗಳಲ್ಲಿ ಸಿಲಿಕಿದ ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಊರುಗಳಿಗೆ ತಲುಪಿಸಲು ಶ್ರಮ ವಹಿಸಿದ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರು ಇತರೆ ಸಿಬ್ಬಂದಿಗೆ ಹೂ ಮಳೆಗರೆದು ಅಭಿನಂದನೆ ಸಲ್ಲಿಸಲಾಯಿತು.

ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಹಾಗೂ ಬಿ.ಆರ್.ಟಿ.ಎಸ್. ವ್ಯವಸ್ಥಾಕ ನಿರ್ದೇಶಕರಾದ ರಾಜೇಂದ್ರ ಚೋಳನ್ ಆಗಮಿಸಿ ಹುಬ್ಬಳ್ಳಿ ವಿಭಾಗದ ಚಾಲಕರು ಹಾಗೂ ನಿರ್ವಾಹಕರುಗಳ ಸಾರ್ಥಕ ಕಾರ್ಯಕ್ಕೆ ಮನದುಂಬಿ ಹರಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಕಳೆದ ಮೂರು ದಿನಗಳಿಂದ ಸರ್ಕಾರದ ನಿರ್ದೇಶನದಂತೆ ವಲಸೆ ಕಾರ್ಮಿಕರನ್ನು ಜಿಲ್ಲೆಗೆ ಬರಮಾಡಿಕೊಳ್ಳು ಹಾಗೂ ಜಿಲ್ಲೆಯಿಂದ ತೆರಳಲು ಅವಕಾಶ ಮಾಡಿಕೊಡಲಾಗಿದೆ. ಸಾರಿಗೆ ಹಾಗೂ ವೈದ್ಯಕೀಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಹಗಲು ರಾತ್ರಿ ಈ ಕರ್ತವ್ಯದಲ್ಲಿ ನಿರ್ವಹಿಸಿದ್ದಾರೆ. ಇವರುಗಳಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಹಾಗೂ ಬಿ.ಆರ್.ಟಿ.ಎಸ್. ವ್ಯವಸ್ಥಾಕ ನಿರ್ದೇಶಕರಾದ ರಾಜೇಂದ್ರ ಚೋಳನ್ ಕೂಡಾ ಮಾತನಾಡಿ,  ಬೆಂಗಳೂರಿನಿಂದ 148 ಬಸ್‍ಗಳಲ್ಲಿ ವಲಸೆ ಕಾರ್ಮಿಕರನ್ನು ಆಗಮಿಸಿದ್ದಾರೆ. 200 ಬಸ್‍ಗಳಲ್ಲಿ  ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಿಗೆ 14000 ಹೆಚ್ಚು ಕಾರ್ಮಿಕರನ್ನು ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ವ್ಯಾಪ್ತಿಯ 8 ಜಿಲ್ಲೆಗಳಿಂದ ಕಳುಹಿಸಿಕೊಡಲಾಗಿದೆ. ಅಲ್ಲದೆ ಇತರೆ ರಾಜ್ಯಗಳಿಗೂ ತರೆಳಿ ವಲಸೆ ಕಾರ್ಮಿಕರನ್ನು ಸಂಸ್ಥೆಯ ಬಸ್‍ಗಳಲ್ಲಿ ಕಳುಹಿಸಲಾಗಿದೆ. ಈ ಕಾರ್ಯದಲ್ಲಿ ಸಂಸ್ಥೆಯ ಚಾಲಕ ನಿರ್ವಾಹಕ ಹಾಗೂ ವೈದ್ಯಕೀಯ ಸಿಬ್ಬಂದಿ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಇವರಿಗೆ ಸಾವಿರ ರೂಪಾಯಿಗಳ ಗೌರವಧನ ನೀಡಿ ಅಭಿನಂದಿಸಲಾಗಿದೆ. ಸಂಸ್ಥೆಯ ಇತರೆ ಜಿಲ್ಲಾ ಘಟಕಗಳಲ್ಲೂ 1500ಕ್ಕೂ ಹೆಚ್ಚು ಚಾಲಕ ನಿರ್ವಾಹಕರಿಗೆ ಅಭಿನಂದನೆ ಸಲ್ಲಿಸುವ ಕಾರ್ಯ ಮಾಡಲಾಗುತ್ತಿದೆ.


Spread the love

Leave a Reply

Your email address will not be published. Required fields are marked *

You may have missed