ಕೆಎಸ್ಸಾರ್ಟಿಸಿ ನೌಕರರಿಗೆ ಅರ್ಧ ಸಂಬಳ: ಜೀವನ ದುಸ್ತರ…!

ಧಾರವಾಡ: ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಜೀವನ ದಿನೇ ದಿನೇ ತೊಂದರೆಯಲ್ಲಿ ಬೀಳುತ್ತಿದೆ. ಕೊರೋನಾ ಬಂದಾಗಿನಿಂದ ನೌಕರರ ಕುಟುಂಬಗಳು ಅನುಭವಿಸುತ್ತಿರುವ ನೋವು ಅಷ್ಟಿಷ್ಟಲ್ಲ. ಇಂತಹ ಸಮಯದಲ್ಲೇ ಇದೀಗ, ಅರ್ಧ ಸಂಬಳ ಹಾಕುವ ಮೂಲಕ ಮತ್ತೆ ಕಷ್ಟವನ್ನುಂಟು ಮಾಡಿದೆ.
ವಾಯುವ್ಯ ರಸ್ತೆ ಸಾರಿಗೆ ನೌಕರರಿಗೆ ಪ್ರತಿ ತಿಂಗಳು 10 ನೇ ತಾರೀಖಿನೊಳಗೆ ಸಂಬಳ ಬರುತ್ತಿತ್ತು. ಈ ಬಾರಿ 15ನೇ ತಾರೀಖಿಗೆ ಸಂಬಳ ಹಾಕಿದ್ದು, ಅದರಲ್ಲಿಯೂ ಅರ್ಧ ಪೇಮೆಂಟ್ ಹಾಕಿದ್ದಾರೆ. ಹೀಗಾಗಿ ನೌಕರರು ಪರದಾಡುವ ಸ್ಥಿತಿ ಬಂದೊದಗಿದೆ.
ವಾಯುವ್ಯ ರಸ್ತೆ ಸಾರಿಗೆ ನೌಕರರ ಬಗ್ಗೆ ಪ್ರತಿದಿನವೂ ಕಾಳಜಿಯಿಂದ ಮಾತನಾಡುವ ಸಂಸ್ಥೆಯು, ಸಂಬಳ ಕೊಡುವಲ್ಲಿ ಮಾತ್ರ, ಹೀಗೆ ಮಾಡುತ್ತಿರುವುದು ಸೋಜಿಗದ ಸಂಗತಿಯಾಗಿದೆ.
ಸಾರಿಗೆ ನೌಕರರು ತಮ್ಮ ಸಮಸ್ಯೆಯನ್ನ ಯಾರಿಗೆ ಹೇಳಬೇಕು ಎಂದು ತಿಳಿಯದೇ, ಕರ್ತವ್ಯ ನಿರ್ವಹಣೆ ಮಾಡುತ್ತ ಮುನ್ನಡೆದಿದ್ದಾರೆ. ಅವರ ಕುಟುಂಬಗಳ ನಿರ್ವಹಣೆಯೇ ಕಷ್ಟಕರವಾಗುತ್ತಿರುವುದು ಮಾತ್ರ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.