ಸಿಎಂ ಬಿಎಸ್‌ವೈ ಆಶೀರ್ವಾದ ಪಡೆದ ರಾಜಕೀಯ ಕಾರ್ಯದರ್ಶಿ ಸಂತೋಷ
ಬೆಂಗಳೂರು: ಸಾಕಷ್ಟು ರಾಜಕೀಯ ಗೊಂದಲಗಳಿಗೆ ಕಾರಣವಾಗಿದ್ದ ಸಿಎಂ ಯಡಿಯೂರಪ್ಪ ಆಪ್ತ ಕಾರ್ಯದರ್ಶಿಯಾಗಿದ್ದ ಎನ್.ಆರ್.ಸಂತೋಷ ಇದೀಗ ರಾಜಕೀಯ ಕಾರ್ಯದರ್ಶಿಯಾಗಿ ಸಿಎಂ ಯಡಿಯೂರಪ್ಪ ಆಶೀರ್ವಾದ ಪಡೆದರು.
ಮುಖ್ಯಮಂತ್ರಿಗಳ ನೂತನ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅಧಿಕಾರ ವಹಿಸಿಕೊಂಡ ನಂತರ ಭೇಟಿ ಮಾಡಿದ ಸಂತೋಷ, ಬಿಎಸ್ ವೈ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ಸಿಎಂ ಯಡಿಯೂರಪ್ಪನವರ ಸಂಬಂಧಿಯೂ ಆಗಿರುವ ಎನ್.ಆರ್.ಸಂತೋಷ ಬಗ್ಗೆ ಬಿಜೆಪಿಯಲ್ಲಿ ಹಲವು ಬಾರಿ ಆಕ್ಷೇಪಗಳು ಕೇಳಿ ಬಂದಿದ್ದವಾದರೂ, ಯಡಿಯೂರಪ್ಪ ಮಾತ್ರ ಸಂತೋಷರನ್ನ ಎಂದು ಬಿಟ್ಟುಕೊಟ್ಟಿರಲಿಲ್ಲ. ಆಪ್ತಕಾರ್ಯದರ್ಶಿಯಾಗಿದ್ದ ಸಂತೋಷರಿಗೆ ರಾಜಕೀಯ ಕಾರ್ಯದರ್ಶಿ ಹುದ್ದೆ ಲಭಿಸಿರುವುದು, ಯಡಿಯೂರಪ್ಪನವರು ಇವರ ಮೇಲೆಯಿಟ್ಟ ನಂಬಿಕೆಯನ್ನ ತೋರಿಸತ್ತೆ.