Posts Slider

Karnataka Voice

Latest Kannada News

ಉತ್ತರಕರ್ನಾಟಕದ ಹುಡುಗಿಯನ್ನ ಸೊಸೆ ಮಾಡಿಕೊಂಡ ದೊಡ್ಡಣ್ಣ: ಸುಮಲತಾ, ರಾಕಲೈನ್ ಸಾಥ್

1 min read
Spread the love

ಗದಗ: ಹಾಸ್ಯನಟ ಹಿರಿಯ ನಟ ದೊಡ್ಡಣ್ಣ ಮಗನ‌ ಮದುವೆ ಸಂಭ್ರಮ. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರುವ ಮದುವೆ. ಗದಗನ ಗುಗ್ಗರಿ ಕುಟುಂಬದ ಜ್ಯೋತಿಯನ್ನು ವರಿಸಲಿರೋ ದೊಡ್ಡಣ್ಣನವರ ಮಗ ಸೂಗುರೇಶ. ವಧುವರರಿಗೆ ಆಶೀರ್ವದಿಸಿದ ಸುಮಲತಾ ಅಂಬರೀಶ್, ರಾಕ್ಲೈನ್ ವೆಂಕಟೇಶ್.
ಕನ್ನಡ ಚಿತ್ರರಂಗದ ಹಿರಿಯ ಹಾಗೂ ಹಾಸ್ಯನಟರ ಮಗನ ಮದುವೆ ನಡೆದಿತ್ತು.‌ ಚಿತ್ರರಂಗದ ಮನೆ ಮದುವೆ ಅಂದ್ರೆ ಅಲ್ಲಿ ಸ್ವರ್ಗವೇ ಧರೆಗಿಳಿದಿರುತ್ತೆ. ಆದ್ರೆ ಇಲ್ಲಿ ಮಾತ್ರ ಬಹಳ ಸಿಂಪಲ್ ಆಗಿ ಮದುವೆ ನಡೀತು. ಇನ್ನು ಉತ್ತರ ಕರ್ನಾಟಕ ಭಾಗದಿಂದ ತಮ್ಮ ಮನೆಗೆ ಸೊಸೆ ಬಂದಿದ್ದು ಆ ಹಿರಿಯ ನಟರ ಸಂತೋಷಕ್ಕೆ ಕಾರಣವಾಗಿತ್ತು.
ಗದಗನ ಅಂದಾನಪ್ಪ ಗುಗ್ಗರಿ ಅವರ ಮಗಳಾದ ಜ್ಯೋತಿ ದೊಡ್ಡಣ್ಣ ಅವರ ಮನೆ ಬೆಳಗೋಕೆ ಅವರ ಕುಟುಂಬದೊಡನೆ ಒಂದಾದ್ರು.
ಉತ್ತರಕರ್ನಾಟಕದ ಹುಡುಗಿಯನ್ನ ತಮ್ಮ ಸೊಸೆ ಮಾಡಿಕೊಂಡ ದೊಡ್ಡಣ್ಣರಿಗೂ ಧನ್ಯವಾದ ಹೇಳುವ ಜೊತೆಗೆ ನವವಿವಾಹಿತರಿಗೆ ಕಂಗ್ರಾಟ್ಸ್ ಹೇಳೋಣಲ್ಲವೇ…


Spread the love

Leave a Reply

Your email address will not be published. Required fields are marked *

You may have missed