ಭಯ ಬೀಳಬೇಡಿ- ಬೆಣ್ಣಿಹಳ್ಳ ಪಾತ್ರದ 13 ಹಳ್ಳಿಗಳಿಗೆ ನೋಡಲ್ ಅಧಿಕಾರಿಗಳ ನೇಮಕ
1 min readಹುಬ್ಬಳ್ಳಿ: ಪ್ರವಾಹ ಪರಿಸ್ಥಿಯನ್ನು ಎದುರಿಸಲು ಮುಂಜಾಗೃತ ಕ್ರಮವಾಗಿ ಹುಬ್ಬಳ್ಳಿ ಗ್ರಾಮಾಂತರ ತಾಲೂಕಿನ ಬೆಣ್ಣಿಹಳ್ಳ ಪಾತ್ರದ 13 ಹಳ್ಳಿಗಳಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ತಹಶೀಲ್ದಾರ ಪ್ರಕಾಶ್ ನಾಸಿ ಹೇಳಿದರು.
ಮುಂಗಾರು ಪ್ರವಾಹ ಪರಿಸ್ಥಿ ನಿರ್ವಹಣೆ ಕುರಿತು ಇಂದು ಮಿನಿ ವಿಧಾನ ಸೌಧದಲ್ಲಿ ಜರುಗಿದ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಪ್ರವಾಹ ನಿರ್ವಹಣೆಗಾಗಿ ಗ್ರಾಮ ಮಟ್ಟದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ಇದರೊಂದಿಗೆ ಗ್ರಾಮದ ಯುವಕರು, ಹಿರಿಯರನ್ನು ಒಳಗೊಂಡ ಸ್ವಯಂ ಸೇವಕರ ತಂಡ ರಚಿಸಲಾಗಿದೆ. ನೋಡಲ್ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಪ್ರವಾಹದ ಕುರಿತು ಸಭೆ ನೆಡೆಸಬೇಕು. ಗ್ರಾಮದಲ್ಲಿ ವಾಸಿಸುವರ ಪ್ರತಿಯೊಬ್ಬರು ವಿವರ ಸಂಗ್ರಹಿಸಬೇಕು. ಮಹಿಳೆಯರು ಮಕ್ಕಳು ಹಾಗೂ ಗರ್ಭಿಣಿಯರ ಮಾಹಿತಿ ಸಂಗ್ರಹಿಸಬೇಕು. ಹಳ್ಳದ ಪಾತ್ರದಲ್ಲಿ ಅಪಾಯ ಮಟ್ಟಕ್ಕೆ ಸಿಲುಕುವ ವಸತಿಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಶಿಥಲಗೊಂಡು ಮಳೆಯಿಂದ ಹಾನಿಗೆ ಒಳಗಾಗುವ ಮನೆಗಳನ್ನು ಸಹ ಗುರಿತಸಬೇಕು. ಅಗತ್ಯ ಕಂಡುಬಂದರೆ ಅಂತಹ ಮನೆಗಳಿಂದಲೂ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಬೇಕು. ಜಿ್ಳಲ್ಲಾಧಿಕಾರಿಗಳ ನಿರ್ದೇಶನದಂತೆ ಮಳೆಯಿಂದ ಹಾನಿ್ಗೆಗೆ ಒಳಗಾದ ಮನೆಗಳ ವಿವರವನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಇಂಜಿನಿಯರ್ ಜಂಟಿಯಾಗಿ ಸ್ಥಳ ಪರಿಶೀಲನೆ ನೆಡೆಸಿ, ಶೇಕಡಾವಾರು ಹಾನಿಯ ಮಾಹಿತಿಯನ್ನು 24 ಗಂಟೆಯ ಒಳಗಾಗಿ ನೀಡಬೇಕು. ಜನಾವಾರುಗಳ ಮಾಹಿತಿ ಸಂಗ್ರಹಿಸಿ ಅಗತ್ಯ ಲಸಿಕೆ ಹಾಗೂ ಔಷಧಿಗಳನ್ನು ಸಿದ್ದವಾಗಿ ಇಟ್ಟುಕೊಳ್ಳಬೇಕು. ಗ್ರಾಮದಲ್ಲಿನ ಉತ್ತಮ ಈಜುಗಾರರು, ಜಿ.ಸಿ.ಬಿ. ಟ್ಯಾಕ್ಟರ್ ಮಾಲಿಕರ ವಿವರ ಸಿದ್ದಪಡಿಸಿ ಇಟ್ಟುಕೊಳ್ಳಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಹುಬ್ಬಳ್ಳಿ ಗ್ರಾಮಾಂತರ ತಾಲೂಕಿನ ನೋಡಲ್ ಅಧಿಕಾರಿಳಾದ ಕೃಷಿ ಇಲಾಖೆ ಉಪನಿರ್ದೇಶ ಮಂಜುನಾಥ ಅಂತರವಳ್ಳಿ ಉಪಸ್ಥಿತರಿದ್ದರು.
ಗ್ರಾಮವಾರು ನೋಡಲ್ ಅಧಿಕಾರಿಗಳ ವಿವರ
ಶಿರಗುಪ್ಪಿ- ಜಿ.ಎಂ.ಕಂದಕೂರ (9535056963)ತಾ.ಪಂ. ಸಹಾಯಕ ನಿರ್ದೇಶಕ.
ಬಂಡಿವಾಡ- ವಿಜಯಕುಮಾರ್ ರ್ಯಾಗಿ (9945105777) ಹಿರಿಯ ಸಹಾಯ ನಿರ್ದೇಶಕ ತೋಟಗಾರಿಕೆ ಇಲಾಖೆ.
ನಾಗರಹಳ್ಳಿ ಹಾಗೂ ಮಂಟೂರ- ಬಿ.ಎನ್.ಗೌಡರ (9916889448) ಸಹಾಯಕ ಅಭಿಯಂತರ ಪಂ.ರಾ.ಇಂ.ವಿಭಾಗ ಹುಬ್ಬಳ್ಳಿ.
ಕಿರೇಸೂರು- ಎಸ್.ಟಿ.ಗೌಡರ (9739778512)ಕಾ.ನಿ.ಇಂ.ಪಂ.ರಾ.ಇಂ ಉಪ ವಿಭಾಗ ಹೊಸೂರ ಹುಬ್ಬಳ್ಳಿ.
ಹೆಬಸೂರ- ರಾಜಶೇಖರ ಅಣಗೌಡ್ರ (8277931288) ಸಹಾಯಕ ಕೃಷಿ ನಿರ್ದೇಶಕ ಹುಬ್ಬಳ್ಳಿ. ಇಂಗಳಹಳ್ಳಿ- ಸಂತೋಷ ಸೂರಿಮಠ (9538820032)ವಲಯ ಅರಣ್ಯಾಧಿಕಾರಿ ಹುಬ್ಬಳ್ಳಿ.
ಕಟ್ನೂರ: ಮಾವನೂರ ಹಾಗೂ ಗಿರಿಯಾಲ- ಸಿ.ವ್ಹಿ.ಕರವೀರಮಠ (8073003565) ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ.
ಶೇರೆವಾಡ- ಸುಭಾಸಚಂದ್ರ ಪಡಗಣ್ಣವರ (9008127745) ತಾಲೂಕಾ ಪಶುವೈದ್ಯಾಧಿಕಾರಿ ಹುಬ್ಬಳ್ಳಿ.
ಇನಾಂ ವೀರಾಪೂರ- ಬಿ.ಬಿ.ಹಾದಿಮನಿ (9449079723) ಸಹಾಯಕ ಕಾ.ನಿ.ಇಂ.ಪಂ.ರಾ.ಇಂ ವಿಭಾಗ ಹುಬ್ಬಳ್ಳಿ.
ಕರಡಿಕೊಪ್ಪ- ಅಶೋಕ ಸಿಂದಿಗಿ (7019380363) ಶಿಕ್ಷಣಾಧಿಕಾರಿಗಳು ಹುಬ್ಬಳ್ಳಿ.