ಮೈಶುಗರ್ ಕಾರ್ಖಾನೆ: ಸರಕಾರದ ಸ್ವಾಮ್ಯದಲ್ಲೇ ಇರಲಿ: ಸಿದ್ಧರಾಮಯ್ಯ ಭೇಟಿ ಮಾಡಿದ ನಿಯೋಗ

ಬೆಂಗಳೂರು: ಮೈಶುಗರ್ ಕಾರ್ಖಾನೆಯನ್ನ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡರು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಭಾಗದ ಸಾವಿರಾರೂ ರೈತರಿಗೆ ಅನುಕೂಲವಾಗುವ ಈ ಕಾರ್ಖಾನೆಯನ್ನ ಪರಭಾರೆ ಮಾಡಿದರೇ, ಹಲವು ಸಮಸ್ಯೆಗಳು ಎದುರಾಗುತ್ತವೆ. ಈಗಾಗಲೇ ಸರಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಇದನ್ನ ಹೇಗಾದರೂ ತಡೆಯಬೇಕೆಂದು ರೈತರು ಕೋರಿದರು. ರೈತ ಮುಖಂಡೆ ಸುನಂದಾ ಜಯರಾಂ ಸೇರಿದಂತೆ ಮತ್ತಿತರರು ಹಾಜರಿದ್ದರು.