ಗಲ್ಲು ಮತ್ತೆ ಮುಂದೂಡಿಕೆ: ಕಾಯುತ್ತಿರುವ ಕುಣಿಕೆ

ನವದೆಹಲಿ: ನಿರ್ಭಯಾ ಪ್ರಕರಣದ ಹಂತಕರು ಕಾನೂನಿನ ಕೆಲವು ನ್ಯೂನತೆಗಳ ಲಾಭ ಪಡೆದು ಗಲ್ಲುಶಿಕ್ಷೆಯನ್ನ ಮತ್ತೋಮ್ಮೆ ಮುಂದೂಡಿಸುವಲ್ಲಿ ಸಫಲರಾಗಿದ್ದಾರೆ.
ರಾಷ್ಟ್ರಪತಿ ಬಳಿ ಅಪರಾಧಿಯೊಬ್ಬನ ಕ್ಷಮಾದಾನ ಮನವಿ ಬಾಕಿಯಿರುವ ಕಾರಣಕ್ಕಾಗಿ ದೆಹಲಿ ನ್ಯಾಯಾಲಯ ಮರಣದಂಡನೆಯನ್ನ ಮುಂದಿನ ಆದೇಶದವರೆಗೆ ಮುಂದೂಡಿದೆ.
ಮೂರನೇಯ ಬಾರಿಗೆ ಗಲ್ಲುಶಿಕ್ಷೆ ಮುಂದೂಡಿದ್ದು ನಿರ್ಭಯಾ ತಾಯಿಗೆ ತೀವ್ರ ನಿರಾಸೆಯಾಗಿದೆ. ಬೇಗನೇ ಆರೋಪಿಗಳಿಗೆ ಗಲ್ಲು ಆಗಲಿ ಎಂದು ಕಾಯುತ್ತಿದ್ದಾರೆ.