ಯಮನೂರಿನ ಹಿರಿಯ ಜೀವ ನೀಲವ್ವ ಹಿರೇಮಠ ಇನ್ನಿಲ್ಲ: ಅಂತ್ಯಕ್ರಿಯೆ ನಾಳೆ
ನವಲಗುಂದ: ತಾಲ್ಲೂಕಿನ ಯಮನೂರು ಗ್ರಾಮದ ನಿವಾಸಿ, ವೀರಶೈವ ಸಮಾಜದ ಹಿರಿಯರಾದ ನೀಲವ್ವ ಬಸಯ್ಯ ಹಿರೇಮಠ (78) ಬುಧವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾದರು.
ಮೂವರು ಪುತ್ರರು ಹಾಗೂ ಅಪಾರ ಬಂಧು- ಬಳಗ ಅಗಲಿರುವ ಮೃತರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 11 ಗಂಟೆಗೆ ಗ್ರಾಮದ ರುದ್ರಭೂಮಿಯಲ್ಲಿ ನಡೆಯಲಿದೆ.
ನೀಲವ್ವ ಹಿರೇಮಠ, ಗ್ರಾಮದ ಪ್ರತಿಯೊಬ್ಬರಲ್ಲೂ ಒಳ್ಳೆಯ ಬಾಂಧವ್ಯನ್ನಿಟ್ಟುಕೊಂಡಿದ್ದರು. ಇವರನ್ನ ನೋಡಿದ ಪ್ರತಿಯೊಬ್ಬರು ಗೌರವದಿಂದ ನಡೆದುಕೊಳ್ಳುತ್ತಿದ್ದರು. ಹೀಗಾಗಿ ಹಿರಿಯ ಜೀವದ ಸಾವು ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.