ನಿಜಗುಣಿ ದಿಂಡಲಕೊಪ್ಪ, ಈರಪ್ಪ ನಾಯ್ಕರಗೆ “ಅತ್ಯುತ್ತಮ ಲೇಖನ” ಜಿಲ್ಲಾ ಪ್ರಶಸ್ತಿ…
1 min readಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡುವ ಅತ್ಯುತ್ತಮ ಲೇಖನ ಪ್ರಶಸ್ತಿಯನ್ನ ವಿಜಯ ಕರ್ನಾಟಕ ಪತ್ರಿಕೆಯ ನಿಜಗುಣಿ ದಿಂಡಲಕೊಪ್ಪ ಹಾಗೂ ಕನ್ನಡಪ್ರಭದ ಈರಪ್ಪ ನಾಯ್ಕರ ಅವರಿಗೆ ಲಭಿಸಿದೆ.
ಪ್ರತಿವರ್ಷ ಜಿಲ್ಲಾ ಸಂಘವೂ ಅತ್ಯುತ್ತಮ ಲೇಖನ ಪ್ರಶಸ್ತಿಯನ್ನ ನೀಡುತ್ತಿದ್ದು ಪ್ರಶಸ್ತಿಯ ನಗದು ಬಹುಮಾನವನ್ನ ಪೊಲೀಸ್ ಇಲಾಖೆಯಲ್ಲಿದ್ದ ಸುಲೇಮಾನ ಅಬ್ದುಲ ಅಜೀಜಸಾಬ ಮುನವಳ್ಳಿಯವರ ಸ್ಮರಣಾರ್ಥ ಅವರ ಕುಟುಂಬದವರು ನೀಡುತ್ತಿದ್ದು, ಇಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.
ಪ್ರಶಸ್ತಿಯನ್ನ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಸೇರಿದಂತೆ ಇನ್ನುಳಿದ ಪ್ರಮುಖರು ಪ್ರಧಾನ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ, ಗಣಪತಿ ಗಂಗೋಳ್ಳಿ, ಬಸವರಾಜ ಬಿಜಾಪುರ, ಬಸವರಾಜ ಹೂಗಾರ, ಸಂಗಮೇಶ ಮೆಣಸಿನಕಾಯಿ, ಬಂಡು ಕುಲಕರ್ಣಿ, ಪ್ರಕಾಶ ನೂಲ್ವಿ, ಸುಶಿಲೇಂದ್ರ ಕುಂದರಗಿ, ಮಂಜುನಾಥ ಅಂಗಡಿ, ಗುರು ಭಾಂಡಗೆ, ಪಿ.ಶೇಖರ, ಬಿ.ಎನ್.ನಾಗರಾಜ, ಯಲ್ಲಪ್ಪ ಸೋಲಾರಗೊಪ್ಪ, ಪ್ರಕಾಶ ಚಳಗೇರಿ, ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.