Posts Slider

Karnataka Voice

Latest Kannada News

ಬಾನಲ್ಲೂ ನೀನೇ, ಭೂವಿಯಲ್ಲೂ ನೀನೇ “ಹಾಡಾಡಿದ” ನಿಜಗುಣಾನಂದ ಶ್ರೀಗಳು- Exclusive Video…

1 min read
Spread the love

ಧಾರವಾಡ: ಬಾನಲ್ಲು ನೀನೇ ಭುವಿಯಲ್ಲೂ ನೀನೇ ಎಂಬ ಬಯಲು ದಾರಿ ಸಿನೇಮಾದ ಹಾಡನ್ನ ಹಾಡುವ ಮೂಲಕ ಹಾಡು ಹಾಡುವವರು ಸ್ವಾಮೀಜಿಗಳಲ್ಲ ಎನ್ನುವ ಚಿಂತನೆ ಹೋಗಬೇಕು ಎಂದು ಮುಂಡರಗಿ ತೋಟದಾರ್ಯ ಮಠದ ನಿಜಗುಣಾಂದ ಸ್ವಾಮೀಜಿ ಹೇಳಿದರು.

ವೀಡಿಯೋ…

ಸಚಿವ‌‌ ಸಂತೋಷ ಲಾಡ್ ಪುತ್ರ‌ ಕರಣ ಲಾಡ್ ರಚನೆಯ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಕರಣ ಲಾಡ್ ಬರೆದಿರುವ ಪುಸ್ತಕ ಓದುತ್ತಾ ಹೋದರೆ, ಅವರು ಸಣ್ಣ ವಯಸ್ಸಿನಲ್ಲಿ ಬರೆದಂತೆ ಕಾಣಲ್ಲ. ಸಮಾಜದಲ್ಲಿ ಎಷ್ಟು ಭ್ರಮೆ ಇದೆ ಎಂದರೆ ಮಧ್ಯಸ್ಥಿಕೆ ಬೇಡ ಎಂದು ಅವರು ಬರೆದಿದ್ದಾರೆ.

ಪೂಜಾರಿ ಮಧ್ಯಸ್ಥಿಕೆ ಬೇಡ ಎಂದು ಬಸವಣ್ಣ ಕೂಡಾ ಹೇಳಿದ್ದಾರೆ. ಪೂಜಾರಿ, ಪಂಚಾಂಗದವರು ಬೇಡ, ಪುರೋಹಿತರು ಹಾಗೂ ಸ್ವಾಮೀಜಿಗಳು ಬೇಡಾ. ತತ್ವ ಎಂದರೆ ಮೋಕ್ಷ ಅಲ್ಲಾ, ತತ್ವ ಎಂದರೆ ದೇವಲೋಕದ ರಂಭೆ, ಮೇನಕೆ ಹಾಗೂ ಊರ್ವಶಿ ಅಲ್ಲಾ. ಆಚಾರವೇ ಸ್ವರ್ಗಾ ಅನಾಚಾರವೇ ನರಕ. ದುರ್ಜನರಿಗಿಂತ ಸಜ್ಜನರು ಬಹಳ ಡೆಂಜರ್. ದುರ್ಜನರು ಒಂದೇ ಕೆಲಸ ಮಾಡ್ತಾರೆ, ಆದರೆ ಸಜ್ಜನರು ನನಗೆ ಯಾಕೆ ಬೇಕು ಎಂದು ಎಲ್ಲವನ್ನ ಮಾಡಿರುತ್ತಾನೆ ಎಂದರು.

ಕಾಂಗ್ರೆಸ್ ಗೆ ಈಗ ನೂರನೇ ವರ್ಷ ಆಗುತ್ತಿದೆ. 1924 ರಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧೀಜಿ ಬಂದಿದ್ರು. ಅದಕ್ಕಾಗಿ ಲಾಡ್ ಅವರು ಹರಳೆಕರ ಮಂಜಪ್ಪ ಸಮಗ್ರ ಸಾಹಿತ್ಯ ಪ್ರಕಟ ಮಾಡಬೇಕು. ಅದು ರಾಜ್ಯ ಸರ್ಕಾರದಿಂದ ಆಗಲಿ. ಗಾಂಧೀಜಿ ನೂರು ವರ್ಷದ ಹಿಂದೆ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಬಂದಾಗ ಇದೇ ಹರಳೆಕರ ಮಂಜಪ್ಪ ಬಸವಣ್ಣ ಅವರನ್ನ‌ ಪರಿಚಯಿಸಿದವರು. ನಮ್ಮಂತ ಸ್ವಾಮೀಜಿಗಳು ಮಾತಾಡೊದೇ ಕಷ್ಟ ಆಗಿದೆ. ಭಯ ಹುಟ್ಟಿದೆ, ಏನಾದರು ಮಾತಾಡಿದರೆ ಕೊಂದು ಬಿಡ್ತೆನೆ ನೋಡು ಅಂತಾರೆ. ಸಮಾಜದ್ರೋಹಿ‌ ನೀವು, ದೇವರ ವಿರೋಧಿ ಅಂತಾರೆ. ನಾನು ಹಾಕಿದ ಸಸಿ ನನ್ನ ಮುಂದೆ ಬೆಳೆಯಿತು, ನಾನೇಕೆ ಬೆಳೆಯಲಿಲ್ಲಾ. ಈ ಮರಕ್ಕೆ ಏಕೆ ಲೋಕಾಯುಕ್ತ ಹಿಡಿಯಲಿಲ್ಲ, ಇದು ಏಕೆ ಪರಪ್ಪನ ಅಗ್ರಹಾರಕ್ಕೆ ಹೋಗಲಿಲ್ಲಾ. ಕೆಲವರು ದೇವರಿಗೆ ಊಟ ಬಿಟ್ಟೆ ಅಂತಾರೆ‌. ತುಪ್ಪ ಹುಗ್ಗಿ ಉಪ್ಪು ಎಲ್ಲ ಬಿಟ್ಟೆನಿ ಅಂತಾರೆ‌. ಒಬ್ಬ ಕವಿ ಅದಕ್ಕೆ ಹೇಳಿದ್ದಾನೆ, ಉಪ್ಪು ಬಿಟ್ಟವನ ಕಂಡೆ, ತುಪ್ಪ ಬಿಟ್ಟವನ ಕಂಡೆ, ಆದರೆ ತಪ್ಪು ಬಿಟ್ಟವನನ್ನು ಕಾಣಲಿಲ್ಲಾ ಎಂದು ಶ್ರೀಗಳು ನುಡಿದರು.


Spread the love

Leave a Reply

Your email address will not be published. Required fields are marked *

You may have missed