ನೈಟ್ ರೌಂಡ್ ಮಾಡುತ್ತಿರುವ ಧಾರವಾಡ ಎಸ್ಪಿ: ಜನರಲ್ಲಿ ಮನವಿ

ಧಾರವಾಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಡರಾತ್ರಿಯವರೆಗೂ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಸಾರ್ವಜನಿಕರು ಹೊರಗೆ ಬರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ನಿನ್ನೆ ರಾತ್ರಿ ಕೂಡ ನವಲಗುಂದ ಪಟ್ಟಣದಲ್ಲಿ ಇನ್ಸ್ ಪೆಕ್ಟರ್ ಚಂದ್ರಶೇಖರ ಮಠಪತಿ ಅವರೊಂದಿಗೆ ರೌಂಡ್ಸ್ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ, ಜನರು ಹೊರಗೆ ಬರದೇ ರೋಗದಿಂದ ದೂರವುಳಿಯಬೇಕೆಂದು ಮನವಿ ಮಾಡಿಕೊಂಡರು.