ನಿಮ್ಮನ್ನೇಕೆ ವಜಾ ಮಾಡಬಾರದು.. NHM ನೌಕರರಿಗೆ ಸಿಇಓ ನೋಟಿಸ್- ಡಿಜಾಸ್ಟರ್ ಕಾಯ್ದೆ ಬಳಕೆಯಾಗತ್ತಂತೆ..!
1 min readರಾಯಚೂರು: ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆರೋಗ್ಯ ಇಲಾಖೆ, ವೈಧ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಹೋರಾಟ ನಡೆಸಿದ್ದು, ಆ ಹೋರಾಟವನ್ನ ಹತ್ತಿಕ್ಕಲು ನೋಟಿಸ್ ನೀಡಿ, 24 ಗಂಟೆಯೊಳಗೆ ಉತ್ತರ ನೀಡಬೇಕೆಂದು ಆದೇಶ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಎನ್.ಎಚ್.ಎಂ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ, ಹೊರಗುತ್ತಿಗೆ ನೌಕರರು ಆದ ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಕಚೇರಿ ಸಿಬ್ಬಂದಿಗಳ ಹಲವಾರು ವರ್ಷಗಳ ಬೇಡಿಕೆಗಳನ್ನ ಈಡೇರಿಸದ ಪರಿಣಾಮ ಕಳೆದ ಮೂರು ದಿನದಿಂದ ಹೋರಾಟ ಆರಂಭವಾಗಿದೆ.
ಈ ಬಗ್ಗೆ ರಾಯಚೂರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾಲ್ಕು ಜನರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಡಿಪಿಎಂ ಸುನೀಲ, ಡ್ಯಾಮ್ ಕೃಷ್ಣ, ಕಾರ್ಯಕ್ರಮ ಆಯೋಜಕ ಅಮರೇಶ ಹಾಗೂ ಆರ್.ಬಿ.ಎಸ್.ಕೆ ವಿಭಾಗದ ಗಣಕಯಂತ್ರ ಸಹಾಯಕ ಜಮೀಲಗೆ ನೋಟಿಸ್ ನೀಡಲಾಗಿದೆ.
ಎನ್.ಎಚ್.ಎಂ ಗುತ್ತಿಗೆ ನೇಮಕಾತಿ ಷರತ್ತುಗಳ ಅನ್ವಯ ನಿಮ್ಮನ್ನ ಏಕೆ ವಜಾ ಮಾಡಬಾರದೆಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, 24 ಗಂಟೆಯಲ್ಲಿ ನೀವೂ ಉತ್ತರ ಕೊಡದೇ ಇದ್ದರೇ ನಿಮ್ಮ ಡಿಜಾಸ್ಟರ್ ಕಾಯ್ದೆಯಡಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಅತೀ ತುರ್ತಾಗಿ ಬೇಕಾಗಿರುವ ಸೇವೆಯನ್ನ ನೀಡುತ್ತಿರುವವರ ಸಮಸ್ಯೆಯನ್ನ ಕೇಳುವ ಬದಲು ಅವರಿಗೆ ಈ ಥರದ ನೋಟಿಸ್ ಗಳನ್ನ ನೀಡುತ್ತಿರುವುದು ಹೋರಾಟಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಿದೆ ಎನ್ನುವುದು ಹೋರಾಟ ನಡೆಸುತ್ತಿರುವ ನೌಕರರ ವಾದವಾಗಿದೆ.