Karnataka Voice

Latest Kannada News

“2025” ಮುಖವಾಡದಲ್ಲೇ ಕಳೆಯಬೇಕು ಅಂದುಕೊಂಡಿದ್ರೇ, ‘ದಯವಿಟ್ಟು’ ಇದನ್ನ ಓದಬೇಡಿ…!!!

Spread the love

ಜೊತೆಗೆ ಬೆಳೆದವರ… ಕೈ ಹಿಡಿದು ನಡೆದವರ… ಬದುಕು ಕಟ್ಟಿಕೊಟ್ಟವರ… ಕುಟುಂಬದವರ ಮುಂದೆ ಮುಖವಾಡ ಬೇಕಾ… ಬೇಡ್ವಾ…

ಶಿವಳ್ಳಿ: ಹೊಸ ದಿನ, ನವೀನ ಭರವಸೆ, ನಿಷ್ಕಲ್ಮಶ ಬದುಕು ಸಾಗಿಸುವ ಇರಾದೆಯೊಂದಿಗೆ ನಡೆಯುವ ಪ್ರತಿಯೊಂದು ಜೀವಾತ್ಮಗಳಿಗೂ ಕರ್ನಾಟಕವಾಯ್ಸ್.ಕಾಂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳನ್ನ ಹೇಳುತ್ತ, ಈ ಕೆಳಗಿನ ನುಡಿಗಳ ಮೇಲೆ ಕಣ್ಣಾಡಿಸುವಂತೆ ಕೇಳಿಕೊಳ್ಳುತ್ತೇನೆ.

ಕಳೆದ ರಾತ್ರಿಯವರೆಗೂ ಏನು ನಡೆಯಿತೋ ಅದೇಲ್ಲವನ್ನ (ಕೆಟ್ಟಗಳಿಗೆ) ಮರೆತು ಬಿಡಿ. ನಿಮ್ಮ ಜೊತೆ ಇರುವ ಕುಟುಂಬ, ಗೆಳೆಯರೊಂದಿಗೆ ಮುಖವಾಡವಿಲ್ಲದೇ ಜೀವಿಸುವ ನಿರ್ಧಾರವನ್ನ ಮಾಡಿ, ಆಗಲೇ ಈ ವರ್ಷ ನಿಮಗೆ ಸಾಕಷ್ಟು ನೆಮ್ಮದಿ ಕೊಡುವುದು ಸತ್ಯ.

ಇವತ್ತಿಂದ ಜೊತೆಗಿದ್ದವರನ್ನ ಬಳಕೆ ಮತ್ತೂ ದುರ್ಭಳಕೆ ಮಾಡುವುದನ್ನ ಬಿಟ್ಟುಬಿಡಿ. ನೀವು ಮನುಷ್ಯರು ಎನ್ನುವುದನ್ನ ಸ್ಮರಿಸಿಕೊಂಡು ಮುನ್ನಡೆಯುವ ಜೀವಿಗಳಾಗಿ. ಇಂತಹ ಮುಖವಾಡವನ್ನ ನೀವು ಮೊದಲು ಹೊಂದಿದ್ದರೇ, ಅಳಸಿ ಅದನ್ನ.

ಪೊಲೀಸ್ ಅಧಿಕಾರಿಗಳು ಕರ್ತವ್ಯದ ಮೂಲಕ ಮುಖವಾಡ ಹಾಕಿಕೊಂಡು ಜನರನ್ನ ದಾರಿ ತಪ್ಪಿಸುತ್ತಿದ್ದರೇ, ಅದನ್ನ ಕಳಚಿಟ್ಟು ಜನರಿಗೆ ಸರಿಯಾದ ರೀತಿಯಲ್ಲಿ ಮಾಹಿತಿಯನ್ನ ತಿಳಿಸುವ ಪ್ರಯತ್ನ ಮಾಡಿ. ಮುಖವಾಡ ಹಾಕಿಕೊಂಡ ಮುಖದ ಬಣ್ಣ ಕಳಚಿದರೇ, ಜನರು ನಂಬಿಕೆಯನ್ನ ಕಳೆದುಕೊಳ್ಳುತ್ತಾರೆ.

ಕಚೇರಿಯಲ್ಲಿ ಮತ್ತೂ ಲೋಗೊ, ಪೆನ್ನು ಹಿಡಿದುಕೊಂಡು ಭ್ರಷ್ಟಾಚಾರದಲ್ಲಿ ಬಂದ ಹಣದಿಂದ ನಿಮ್ಮ ಮನೆಯವರಿಗೆ ಖುಷಿ ಪಡಿಸುವ ಯತ್ನಕ್ಕೆ ಮುಂದಾಗುವ ಮುಖವಾಡ ಹೊಂದಿದ್ದರೇ, ಅದನ್ನ ಮರೆತುಬಿಡಿ. ಕರ್ಮ್ ರಿಟರ್ನ್ಸ್ ಎಂಬ ಮಾತು ಮುಖವಾಡ ಹೊಂದಿ ಭ್ರಷ್ಟಾರಾದವರಿಗೂ ಬರತ್ತೆ ಎಂಬುದು ತಿಳಿದಿರಲಿ.

ಯಾರನ್ನೋ ನೋಡಿ ನೀವೂ ಅದೇ ರೀತಿಯ ಮುಖವಾಡ ಹೊಂದಬೇಕು ಎಂದು ಅಂದುಕೊಳ್ಳುತ್ತಿದ್ದರೇ, ಆ ಮುಖವಾಡ ಯಾವತ್ತಿಗೂ ಒಳ್ಳೆಯದಾಗಲ್ಲ. ನಿಮ್ಮ ಮೊದಲಿನ ಜೀವನ ತಂದೆ-ತಾಯಿ, ಕುಟುಂಬವನ್ನ ಸ್ಮರಿಸಿಕೊಳ್ಳಿ. ಗೌರವಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅವರೇಗೆ ಇದ್ರು ಎಂಬ ಸತ್ಯ ಅರಿತುಕೊಳ್ಳಿ.

ಹುಟ್ಟುವಾಗ ಬಡವನಾಗಿ ಹುಟ್ಟಿದ್ರೇ ಪರ್ವಾಗಿಲ್ಲ, ಸಾಯುವಾಗ ಮಾತ್ರ ಬಡವನಾಗಿ ಸಾಯಲ್ಲ ಎಂಬ ವಾಟ್ಸಾಫ್, ಫೇಸ್‌ಬುಕ್ ಡೈಲಾಗಗಳು ನೋಡಲು ಚೆಂದ. ಅದನ್ನ ಅರ್ಥೈಸಿಕೊಳ್ಳಲು ಮುಖವಾಡದ ಅವಶ್ಯಕತೆಯಿಲ್ಲ.

ನಂಬಿಕೆಯಿಂದ ಇದ್ದವರ ಜೊತೆಗಿರಿ. ಮೋಸದಿಂದ ಹಣ ಗಳಿಸುವ, ವಂಚಿಸುವ ಕೆಲಸಕ್ಕೆ ಕೈ ಹಾಕಬೇಡಿ. ಬದುಕು ದೊಡ್ಡದು… ಮುಖವಾಡ ಇರದೇ ಇದ್ರೇ ಅದು ಅದ್ಭುತ…

Once Again Wish You Happy New Year…


Spread the love

Leave a Reply

Your email address will not be published. Required fields are marked *