Posts Slider

Karnataka Voice

Latest Kannada News

ನಾಳೆಯಿಂದ ರಾಜ್ಯದಲ್ಲಿ ಹೊಸ ರೂಲ್ಸ್- ಹೆಂಗಿರತ್ತೆ ಗೊತ್ತಾ…!

1 min read
Spread the love

ಬೆಂಗಳೂರು: ರಾಜ್ಯಾದ್ಯಂತ ಲಾಕ್ ಡೌನ್ ನಿಯಮದಲ್ಲಿ ಇನ್ನಷ್ಟು ಸಡಿಲಿಕೆ ಮಾಡಲಾಗಿದ್ದು, ನಾಳೆಯಿಂದ ಅನ್ ಲಾಕ್-4.0 ಜಾರಿಗೆ ಬರಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ನಾಳೆಯಿಂದ ಲಾಕ್ ಡೌನ್ ನಿಯಮದಲ್ಲಿ ಹಲವು ಸಡಿಲಿಕೆ ಮಾಡಲಾಗುತ್ತಿದ್ದು, ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ವಿಶೆಷ ಪೂಜೆ-ಪುನಸ್ಕಾರಗಳನ್ನು ನೆರವೇರಿಸಲು ಅವಕಾಶ ನೀಡಲಾಗಿದೆ. ಆದರೆ ಕೋವಿಡ್ ನಿಯಮ ಪಾಲಿಸುವುದು ಕಡ್ಡಾಯ ಎಂದರು.

ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಕೆಲ ನಿರ್ಬಂಧಗಳನ್ನು ವಿಧಿಸಲಾಗಿದೆ. ಇನ್ನು ಕೋವಿಡ್ ಮೂರನೇ ಅಲೆ ಬಗ್ಗೆ ಎಚ್ಚರವಹಿಸುವಂತೆ ಸೂಚಿಸಲಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಲು ಹಾಗೂ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಅನ್ ಲಾಕ್ -4.0 ಏನಿರುತ್ತೆ ಏನಿರಲ್ಲಾ?:

ನಾಳೆಯಿಂದ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ, ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ
ದೇವಸ್ಥಾನಗಳಲ್ಲಿ ಇದ್ದ ನಿರ್ಬಂಧ ಸಂಪೂರ್ಣ ತೆರವು. ಪೂಜೆ-ಪುನಸ್ಕಾರಗಳಿಗೆ ಅನುಮತಿ
ಜುಲೈ 26ರಿಂದ ಪದವಿ ತರಗತಿಗಳು ಆರಂಭ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮೊದಲ ಡೋಸ್ ವ್ಯಾಕ್ಸಿನ್ ಕಡ್ಡಾಯ
ನೈಟ್ ಕರ್ಫ್ಯೂ ರಾತ್ರಿ 10ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಜಾರಿ
ಮದುವೆ ಸಮಾರಂಭಗಳಿಗೆ ಹಿಂದೆ ಇದ್ದ ನಿರ್ಬಂಧ ಮುಂದುವರಿಕೆ, 100 ಜನರಿಗೆ ಮಾತ್ರ ಅವಕಾಶ
ಅಂತ್ಯಸಂಸ್ಕಾರಗಳಿಗೆ 20 ಜನರಿಗೆ ಅವಕಾಶ
ಒಳಾಂಗಣ ಚಿತ್ರೀಕರಣಕ್ಕೆ ಅವಕಾಶವಿಲ್ಲ
ಪಬ್, ಕ್ಲಬ್ ಗಳು ಸಧ್ಯಕ್ಕೆ ತೆರೆಯಲು ಅವಕಾಶವಿಲ್ಲ
ಈಜುಕೊಳಗಳಿಗೆ ಸಧ್ಯಕ್ಕಿಲ್ಲ ಅನುಮತಿ


Spread the love

Leave a Reply

Your email address will not be published. Required fields are marked *