ಕತ್ತಲಲ್ಲಿ ಕಸಬಾಪೇಟೆ ಪೊಲೀಸ್ ಠಾಣೆ “ಓಪಿ”…

ಹುಬ್ಬಳ್ಳಿ: ಸಾರ್ವಜನಿಕರ ನೆಮ್ಮದಿಯನ್ನ ಕಾಪಾಡಲು ಸದಾಕಾಲ ಮುಂದಿರುವ ಪೊಲೀಸರ ಹೊರಠಾಣೆಗೆ ವಿದ್ಯುತ್ ಇಲ್ಲದೇ ಇರುವುದು ನಾಗರಿಕರಲ್ಲಿ ಬೇಸರ ಮೂಡಿಸಿದ್ದು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.

ನೇಕಾರನಗರದ ಹೊರಠಾಣೆಯೊಳಗೆ ವಿದ್ಯುತ್ ಇಲ್ಲದೇ ಇರುವುದರಿಂದ ಪೂರ್ತಿಯಾಗಿ ಕತ್ತಲು ಆವರಿಸಿದೆ. ಇದು ನೋಡುಗರಲ್ಲಿಯೂ ಅಸಮಧಾನ ಮೂಡಿಸಿದೆ.
ಕಸಬಾಪೇಟೆ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಗಳು ಇದಕ್ಕೊಂದು ವ್ಯವಸ್ಥೆ ಮಾಡಬೇಕಲ್ಲವೇ. ಸಾರ್ವಜನಿಕರು ಬರುವುದಾದರೇ ಹೇಗೆ ಬರಬೇಕು ಎಂಬ ಪ್ರಶ್ನೆಗೆ ಉತ್ತರವಿಲ್ಲವಾಗಿದೆ.