“ನೇಹಾ ಕೊಂದ ಫಯಾಜ್” 6ದಿನ ಸಿಐಡಿ ಕಸ್ಟಡಿಗೆ- ಇಂದೇ ವಶಕ್ಕೆ ಸಾಧ್ಯತೆ…!!!!

ಹುಬ್ಬಳ್ಳಿ: ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನ ಹತ್ಯೆ ಮಾಡಿ ಧಾರವಾಡ ಕಾರಾಗೃಹದಲ್ಲಿರುವ ಆರೋಪಿ ಫಯಾಜ್ ಕೊಂಡಿಕೊಪ್ಪನನ್ನ ಆರು ದಿನಗಳವರೆಗೆ ಸಿಐಡಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಿವಿಬಿ ಕ್ಯಾಂಪಸ್‌ನಲ್ಲಿ ನಡೆದ ಹತ್ಯೆಗೆ ಸಂಬಂಧಿಸಿದ ಪ್ರಕರಣವನ್ನ ರಾಜ್ಯ ಸರಕಾರ ಸಿಐಡಿಗೆ ನೀಡಿದ್ದರಿಂದ, ಆರೋಪಿಯ ವಿಚಾರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಇದೇ ಕಾರಣದಿಂದ ಹುಬ್ಬಳ್ಳಿಯ ಒಂದನೇಯ ಅಧಿಕ ದಿವಾಣಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 15 ದಿನಗಳ ಕಸ್ಟಡಿಗೆ ಕೊಡುವಂತೆ ಸಿಐಡಿ ಅಧಿಕಾರಿಗಳು ಕೋರಿದ್ದರು. ಈ ಹಿನ್ನೆಲೆಯಲ್ಲಿ ಆರು ದಿನ ಕಸ್ಟಡಿಗೆ ನೀಡಲಾಗಿದೆ.
ನೇಹಾ ಹಿರೇಮಠ ಹತ್ಯೆಯ ಹಿಂದೆ ಬೇರೆಯವರು ಇದ್ದಾರೆ ಎಂಬ ಆರೋಪವನ್ನ ನೇಹಾಳ ತಂದೆ ನಿರಂಜನ ಹಿರೇಮಠ ಮಾಡಿದ್ದರು.