ನೀಟ್ ನಲ್ಲಿ ಶೋಯಬ್ ಐತಿಹಾಸಿಕ ದಾಖಲೆ- 720ಕ್ಕೆ 720
ಕೋಟಾ: ಇಲ್ಲಿನ ಸರ್ವೋದಯ ಸಿನೀಯರ್ ಸೆಕೆಂಡರಿ ಕಾಲೇಜಿನ ವಿದ್ಯಾರ್ಥಿ ನೀಟ್ ಪರೀಕ್ಷೆಯಲ್ಲಿ ಐತಿಹಾಸಿಕ ದಾಖಲೆಯನ್ನ ನಿರ್ಮಾಣ ಮಾಡಿದ್ದು, ಭಾರತದಲ್ಲಿ ಇದು ಪ್ರಥಮ ದಾಖಲೆಯಾಗಿದೆ.
ರೋಲ್ ನಂಬರ 3905115049 ಹೊಂದಿದ್ದ ಶೋಯಬ್ ಅಪ್ತಾಬ್, ನೀಟ್ ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿ, ದಾಖಲೆಯನ್ನ ನಿರ್ಮಾಣ ಮಾಡಿದ್ದು, ಕೋಟಾದ ಜನತೆ ಸಂತಸಗೊಂಡಿದೆ.
ನೀಟ್ ನ 720ಕ್ಕೆ 720 ಅಂಕಗಳನ್ನ ಇಲ್ಲಿಯವರೆಗೆ ಯಾವ ವಿದ್ಯಾರ್ಥಿಗಳು ಇಂತಹ ದಾಖಲೆಯನ್ನ ಮಾಡಿರಲಿಲ್ಲ. ಇದು ಕೋಟಾದ ಗೌರವವನ್ನ ಭಾರತದಲ್ಲಿ ಬೆಳಗಿಸಿದೆ ಎಂದು ಶಾಲೆಯ ಮುಖ್ಯಸ್ಥ ಎ.ಜಿ.ಮಿರ್ಜಾ ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಯ ಸಾಧನೆ ಎಲ್ಲವನ್ನೂ ಮೀರಿ ಬೆಳೆದಿದೆ. ಆತ ಮೊದಲಿಂದಲೂ ಬುದ್ಧಿವಂತನಾಗಿದ್ದ. ಅದನ್ನ ನೀಟ್ ಪರೀಕ್ಷೆಯಲ್ಲಿ ಮಾಡಿ ತೋರಿಸಿದ್ದಾನೆಂದು ಶೋಯಬನನ್ನ ಗುಣಗಾನ ಮಾಡುವ ಜೊತೆಗೆ ಆತನಿಗೆ ಸತ್ಕಾರ ಮಾಡಿದ್ರು.
ಈ ಬಗ್ಗೆ ಮಾತನಾಡಿರುವ ಶೋಯಬ್ ಅಪ್ತಾಬ್, ನನಗೆ ಸರ್ವೋದಯ ಶಿಕ್ಷಣ ಸಂಸ್ಥೆ ನೀಡಿದ ಪ್ರೋತ್ಸಾಹವೇ ಕಾರಣ ಎಂದು ಹೇಳಿದರು.