ಧಾರವಾಡ- ಕಟ್ಟಡ ಕುಸಿದ್ರೇ NDRF ಮಾಡೋದು ಏನು..! ಡಿಸಿ ಕಚೇರಿ ಬಳಿ ನಡೆದ್ದೇನು..
1 min readಧಾರವಾಡ: ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಕೂಗಳತೆ ದೂರದಲ್ಲಿ ಜನವೋ ಜನ. ಎನ್.ಡಿ.ಆರ್.ಎಫ್ ತಂಡ ಕೂಡಾ ಹಿಂದಿ ಪ್ರಚಾರ ಸಭೆಯ ಕಚೇರಿಯ ಮೇಲೆ ಹತ್ತಿ ಯಾರನ್ನೋ ಬದುಕಿಸುತ್ತಿದ್ದರು. ಅಲ್ಲೇನಾಗಿದೆ, ಬೆಂಕಿ ಅನಾಹುತ ಸಂಭವಿಸುತ್ತಿದೇಯಾ.. ಎಂದೇಲ್ಲ ಕೇಳುತ್ತಿದ್ದಾಗ ಗೊತ್ತಾಗಿದೆ ಬೇರೆ ವಿಷಯ..
ಹೌದು.. ಇವತ್ತು ಧಾರವಾಡ ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದಿಂದ ಕುಸಿತಗೊಂಡ ಕಟ್ಟಡದ ಅಣುಕು ಪ್ರದರ್ಶನ ನಡೆಯಿತು.
ಕಟ್ಟಡದಲ್ಲಿ ಸಾರ್ವಜನಿಕರು ಸಿಲುಕಿಕೊಂಡರೇ ಎನ್.ಡಿ.ಆರ್.ಎಫ್ ತಂಡ ಹೇಗೆ ಅದನ್ನೇಲ್ಲ ನಿಭಾಯಿಸುತ್ತದೆ ಎಂಬುದನ್ನ ತೋರಿಸಿಕೊಟ್ಟರು. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲಿದ್ದರು.