“ಸೆರಗೊಡ್ಡಿ ಮಗನ ಶವ” ಕೇಳಿದ ನತದೃಷ್ಟ ನವೀನನ ತಾಯಿ…
1 min readಹಾವೇರಿ: ತಮ್ಮ ಮಗನ ಶವವನ್ನ ಹೇಗಾದರೂ ಮಾಡಿ ತಂದು ಕೊಡಿ ಎಂದು ಉಕ್ರೇನ್ ದಲ್ಲಿ ಸಾವಿಗೀಡಾಗಿರುವ ನವೀನನ ತಾಯಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಗದ್ಗಧಿತರಾಗಿ ಕೇಳಿಕೊಂಡರು.
ಹಾವೇರಿ…
ಮೃತ ನವೀನ್ ನಿವಾಸಕ್ಕೆ ಆಗಮಿಸಿದ ಸಿ ಎಂ ಬೊಮ್ಮಾಯಿ.
ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಚಳಗೇರಿ ಗ್ರಾಮ.
ರಾಣೆಬೇನ್ನೂರು ನಗರದ ಹುಲಿಹಳ್ಳಿ ಹೆಲಿಪ್ಯಾಡ್ ನಿಂದ ಚಳಗೇರಿ ಗ್ರಾಮಕ್ಕೆ ಆಗಮನ.
ಮೃತ ನವೀನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಸಿ ಎಂ.
ಮೃತ ನವೀನ್ ತಂದೆ ಶೇಖರಗೌಡ ಅವರ ಕೈಗೆ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದ ಸಿಎಂ ಬೊಮ್ಮಾಯಿ
ನವೀನ್ ಮೃತ ದೇಹ ಚಳಗೇರಿಗೆ ತರುವಂತೆ ಲಿಖಿತ ಮನವಿ ನೀಡಿದ ಪೋಷಕರು, ಗ್ರಾಮಸ್ಥರು.
ಹಾವೇರಿ…
ಹಾವೇರಿ – ಚಳಗೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ…
ದುರ್ದೈವ ವಶಾತ್ ನವೀನ್ ಸಾವು
ಈ ಸುದ್ದಿ ತಡೆದುಕೊಳ್ಳೋಕೆ ಆಗಲ್ಲ.
ಭವಿಷ್ಯ ರೂಪಿಸಿಕೊಳ್ಳೋಕೆ ಹೋದಾತ ದುರಂತ ಅಂತ್ಯ ಕಂಡಿದ್ದಾನೆ.
ನಾವ್ಯಾರೂ ಊಹಿಸರಲಿಲ್ಲ
ನವೀನ್ ದೇಹವನ್ನು ತಾಯ್ನಾಡಿಗೆ ತರೋಕೆ ನಿರಂತರ ಪ್ರಯತ್ನ ನಡೆದಿದೆ.
ಮಾರ್ಚುರಿಯಲ್ಲಿ ಬಾಡಿ ಇಟ್ಟಿರೋದಾಗಿ ಮಾಹಿತಿ ಸಿಕ್ಕಿದೆ.
ಬಾಂಬ್ ದಾಳಿ ನಿಂತ ನಂತರ ಪಾರ್ಥೀವ ಶರೀರ ತರೋಕೆ ಪ್ರಯತ್ನಿಸ್ತೇವೆ.
ಯುದ್ಧ ಆದಷ್ಟು ಬೇಗ ನಿಲ್ಲ ಲಿ
ಇನ್ನೂ ಹಲವಾರು ಜನ ಸಿಲುಕಿಕೊಂಡಿದ್ದಾರೆ.
ಹಾವೇರಿ ಬ್ರೇಕಿಂಗ್ …..
ಮೃತ ನವೀನ ತಾಯಿ ವಿಜಯಲಕ್ಷ್ಮಿ ಹೇಳಿಕೆ.
ನವೀನ ತಾಯಿ
ಮಗನ ಪಾರ್ಥೀವ ಶರೀರ ಇದೆ ಎಂಬುದು ಖಚಿತ ಇರಲಿಲ್ಲ.
ಸಿಎಂ ಹೇಳಿದ ಮೇಲೆ ಭರವಸೆ ಬಂತು.
ಪಾರ್ಥೀವ ಶರೀರ ಬರುತ್ತೆ ಅನ್ನೋ ವಿಶ್ವಾಸವಿದೆ.
ನವೀನ ಕೊಹಿನೂರ ವಜ್ರಕ್ಕೆ ಸಮನಾಗಿದ್ದ.
ಉಕ್ರೇನ್ ನಲ್ಲಿ ಸಿಲುಕಿರೋ ಮಕ್ಕಳು ಸುರಕ್ಷಿತವಾಗಿ ಬಂದ ಮೇಲೆ ಅವರಲ್ಲಿ ನನ್ನ ಮಗನನ್ನ ಕಾಣುತ್ತೇನೆ.
ಮಾತನಾಡುತ್ತಲೆ ಮಗನನ್ನು ನೆನೆದು ಕಣ್ಣೀರಾದ ನವೀನ ತಾಯಿ ವಿಜಯಲಕ್ಷ್ಮಿ.
ಸಿಎಂ ಬೊಮ್ಮಾಯಿ ಭೇಟಿ ವೇಳೆ ಸಿಎಂ ಬಳಿ ಮಗನ ಪಾರ್ಥೀವ ಶರೀರ ತರಿಸುವಂತೆ ಸೆರಗೊಡ್ಡಿ ಬೇಡಿದ ನವೀನ ತಾಯಿ ವಿಜಯಲಕ್ಷ್ಮಿ.