ನವನಗರದಲ್ಲಿ “ಅದನ್ನ” ತೋರಿಸಿದ್ದವನನ್ನ ಪೊಲೀಸರು ಬಿಟ್ಟು ಕಳಿಸಿದ್ಯಾಕೆ…!?
1 min readಹುಬ್ಬಳ್ಳಿ: ನವನಗರದ ಪ್ರಮುಖ ಸ್ಥಳವೊಂದರಲ್ಲಿ ಯುವತಿಯರ ಮುಂದೆ ನಿಂತು ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನ ಹಿಗ್ಗಾ-ಮುಗ್ಗಾ ಬಾರಿಸಿ, ಪೊಲೀಸರಿಗೆ ಒಪ್ಪಿಸಿದರೂ, ಎಪಿಎಂಸಿ ಠಾಣೆ ಪೊಲೀಸರು ಆತನನ್ನ ಬಿಟ್ಟು ಕಳಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಕೆಲ ಯುವತಿಯರು ನವನಗರದ ಬಸ್ ನಿಲ್ದಾಣದ ಬಳಿ ನಿಂತಾಗ ಬಸವರಾಜ್ ಎಂಬಾತ, ಬೈಕಿನಲ್ಲಿ ಬಂದು ನಿಂತಿದ್ದಾನೆ.ಅಷ್ಟೇ ಅಲ್ಲ, ಬೈಕಿನಲ್ಲಿಯೇ ಕುಳಿತು ತನ್ನ ಮರ್ಮಾಂಗವನ್ನ ತೋರಿಸುವ ಪ್ರಯತ್ನ ಮಾಡಿದ್ದಾನೆ. ಇಲ್ಲಿದೆ ನೋಡಿ ಎಕ್ಸಕ್ಲೂಸಿವ್ ವೀಡಿಯೋ..
ಹೀಗೆ ಮಾಡುತ್ತಿದ್ದ ಬಸವರಾಜನಿಗೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯೋರ್ವಳು ಸರಿಯಾಗಿಯೇ ತದಕಿದ್ದಾಳೆ. ಅಷ್ಟೇ ಅಲ್ಲ, ಆತನ ಬೈಕ್ ಸಮೇತ ಪೊಲೀಸರಿಗೆ ಒಪ್ಪಿಸಿದ್ದಾರೆ. ಸೋಜಿಗವೆಂದರೇ ಕೆಲವೇ ಸಮಯದಲ್ಲಿ ಆತನನ್ನ ರಾಜ ಮರ್ಯಾದೆಯಿಂದ ಪೊಲೀಸರೇ ಮನೆಗೆ ಬಿಟ್ಟು ಬಂದಿದ್ದಾರೆ.
ಈ ವಿಷಯ ಗೊತ್ತಾದ ತಕ್ಷಣವೇ ತನ್ನ ಕುಟುಂಬದೊಂದಿಗೆ ಮತ್ತೆ ಠಾಣೆಗೆ ಬಂದ ಯುವತಿ, ಪೊಲೀಸರ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದ್ಯಾಕೆ, ಎಪಿಎಂಸಿ ಠಾಣೆಯಲ್ಲಿ ಪೊಲೀಸರು ಹಿಂಗಾಡ್ತಾರೋ ಎಂಬ ಪ್ರಶ್ನೆ ಮತ್ತೆ ಮೂಡಿದೆ.
ತಡರಾತ್ರಿ ಪ್ರಭಾರಿ ಇನ್ಸಪೆಕ್ಟರ್ ಬಿ.ಎ.ಜಾಧವ ಪ್ರಕರಣ ದಾಖಲಿಸಿ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಒಂದು ಹಂತದಲ್ಲಿ ರೋಸಿ ಹೋದ ಯುವತಿ ಪೊಲೀಸ್ ಕಮೀಷನರ್ ಹತ್ತಿರ ಹೋಗುತ್ತೇನೆ ಎಂದಾಗ, ಕಾಮುಕ ಬಸವರಾಜನ ವಿರುದ್ಧ ಕಾನೂನು ಕ್ರಮ ಆಗಿದೆ ಎಂಬ ಭಾವನೆ ಮೂಡಿದೆ.
ಇನ್ನೂ ಬಂಧನಕ್ಕೆ ಒಳಗಾಗಿರುವ ಬಸವರಾಜ್ ಬೈಕಿನಲ್ಲಿ ಬಂದು, ಹೀಗೆ ಅಸಹ್ಯವಾಗಿ ವರ್ತನೆ ಮಾಡುತ್ತಲೇ ಬಂದಿದ್ದಾನೆ. ಆದರೆ, ಇಂತಹ ಧೈರ್ಯವನ್ನ ಯಾರೂ ಮಾಡಿರಲಿಲ್ಲ. ಗಾಮನಗಟ್ಟಿಯ ಯುವತಿಯ ಗಟ್ಟಿತನದಿಂದ “ಬಸವರಾಜ್” ಜೈಲು ಪಾಲಾಗಿದ್ದಾನೆ.