ನವನಗರದಲ್ಲಿ “ಅಟ್ಟಹಾಸ ಮೆರೆದ” ವಿಜಯಕುಮಾರ ಅಪ್ಪಾಜಿ- ಸಿಸಿಟಿವಿ ದೃಶ್ಯಗಳು ವೈರಲ್….
ಹುಬ್ಬಳ್ಳಿ: ತನ್ನ ಮಗನ ಕಟಿಂಗ್ ಮಾಡುವ ಸಂಬಂಧವಾಗಿ ಸಲೂನ್‌ದಲ್ಲಿನ ಮೂವರನ್ನ ನವನಗರದ ಪ್ರಮುಖ ವ್ಯಕ್ತಿಯೋರ್ವ ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.
ಕಳೆದ ತಿಂಗಳಷ್ಟೇ ಪೊಲೀಸ್ ಕಮೀಷನರ್ ಸಮೇತ ಬಹುತೇಕ ನಾಯಕರನ್ನ ಕರೆದು ಕಾರ್ಯಕ್ರಮ ನಡೆಸಿದ್ದ ವಿಜಯಕುಮಾರ ಅಪ್ಪಾಜಿ ಎಂಬುವವರೇ, ಸಲೂನ್‌ದಲ್ಲಿನ ಕಾರ್ಮಿಕರಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿರುವುದನ್ನ ಸಲೂನ್ ಮಾಲೀಕ ದೃಢಪಡಿಸಿದ್ದಾರೆ.
ಇಲ್ಲಿದೆ ನೋಡಿ ಹಲ್ಲೆಯ ವೀಡಿಯೋ…
ಇಷ್ಟೊಂದು ಅಮಾನವೀಯ ಘಟನೆ ಪೊಲೀಸ್ ಕಮೀಷನರ್ ಕಚೇರಿಯ ಕೂಗಳತೆ ದೂರದಲ್ಲಿ ನಡೆದಿದೆ. ಅಷ್ಟೇ ಅಲ್ಲ, ನವನಗರದ ಎಪಿಎಂಸಿ ಪೊಲೀಸ್ ಠಾಣೆಗೂ ಗೊತ್ತಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಆಗಿಲ್ಕವೆಂದು ಹೇಳಲಾಗಿದೆ.