ನವಲೂರ ಬ್ರಿಡ್ಜ್ ಮೇಲೆ, ತಾನೇ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್‌ನಲ್ಲಿ ಸಿಲುಕಿ ಡ್ರೈವರ್ ದುರ್ಮರಣ…!!!

ಧಾರವಾಡ: ತಾನೇ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಸಿಲುಕಿ ಚಾಲಕನೋರ್ವ ಸಾವಿಗೀಡಾಗಿರುವ ಘಟನೆ ಕೆಲವೇ ಸಮಯದ ಹಿಂದೆ ನವಲೂರಿನ ಸೇತುವೆಯಲ್ಲಿ ಸಂಭವಿಸಿದೆ.
ಧಾರವಾಡದಿಂದ ಹುಬ್ಬಳ್ಳಿಯತ್ತ ಹೊರಟಿದ್ದ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಅಮರಗೋಳದ ಅಂದಾಜು 40 ವಯಸ್ಸಿನ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ಗಾಲಿಯೊಳಗೆ ಸಿಲುಕಿ ತೀವ್ರವಾದ ರಕ್ತಸ್ರಾವದಿಂದ ಸಾವಿಗೀಡಾಗಿದ್ದಾನೆ.
ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಶವವನ್ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸಾವಿಗೀಡಾಗಿರುವ ಪೂರ್ಣ ಮಾಹಿತಿ ಇನ್ನೂ ಲಭಿಸಿಲ್ಲ.