ನವಲೂರ ಶಾಲೆಯಿಂದ “ಬಸಾಪುರ” ತರಲು ಹುಡೇದಮನಿ ಹರಸಾಹಸ.. ಡಿಡಿಪಿಐ ಬೆಂಬಲವಂತೆ… ಬಿಇಓ ಪಾತ್ರವೇನು…!?

ಧಾರವಾಡ: ದಶಕಗಳ ಕಾಲದಿಂದಲೂ ಡೆಪ್ಟೇಷನ್ ಮಾಡಿಸಿಕೊಂಡು ಧಾರವಾಡದಲ್ಲಿಯೇ ಸಮಯ ಕಳೆಯುತ್ತಿದ್ದ ನವಲೂರ ಗ್ರಾಮದ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಶಿಕಾಂತ ಬಸಾಪುರ ಅವರನ್ನ ಮತ್ತೆ ಡೆಪ್ಟೇಷನ್ ಮಾಡಿಸಲು ಹರಸಾಹಸವನ್ನ ಇಲಾಖೆಯವರೇ ಮಾಡುತ್ತಿದ್ದು, ಶಾಲಾ ಆಡಳಿತ ಮಂಡಳಿ ರೋಸಿ ಹೋಗಿದೆ.
ಶಶಿಕಾಂತ ಬಸಾಪುರ ಅವರನ್ನ ಧಾರವಾಡ ಶಹರದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಹುದ್ದೆಯಿಲ್ಲದೆ ಇದ್ದರೂ, ಪ್ರತಿವರ್ಷ ನವಲೂರ ಶಾಲೆಯಿಂದ ಡೆಪ್ಟೇಷನ್ ಮಾಡಿಸಿಕೊಂಡು ಇಲ್ಲಿಯೇ ಇರುವುದು ವಾಡಿಕೆಯಾಗಿತ್ತು.
ಈ ಬಾರಿ ಧಾರವಾಡ ಜಿಲ್ಲೆಯ ಡಿವೈಪಿಸಿಯಾಗಿರುವ ಎಸ್.ಎಂ.ಹುಡೇದಮನಿ ಅವರು, ಬಸಾಪುರ ಅವರ ಡೆಪ್ಟೇಷನ್ ಆಗದೇ ಬೇರೆ ವ್ಯವಸ್ಥೆ ಮಾಡಲಾಗಿದೆ.
ಎಸ್.ಎಂ.ಹುಡೇದಮನಿ ಅವರನ್ನ ಹೀಗೆ ಮಾಡಲು ಸೂಚನೆ ನೀಡಿದ್ದು ಡಿಡಿಪಿಐ ಎಸ್.ಎಸ್.ಕೆಳದಿಮಠ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶಾಲಾ ಸುಧಾರಣಾ ಸಮಿತಿಯವರನ್ನ ಸಂಪರ್ಕಿಸಿದಾಗ, ಅವರು ಹೇಳಿದ ಮಾತುಗಳೇ ಬೇರೆಯಿವೆ.
ಈ ನಡುವೆ ಧಾರವಾಡ ಶಹರ ಬಿಇಓ ಅಶೋಕಕುಮಾರ ಸಿಂದಗಿ ಅವರಿಗೂ ಒತ್ತಡ ಹೇರಲಾಗುತ್ತಿದೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಶಶಿಕಾಂತ ಬಸಾಪುರ ಅವರು ಜೇಷ್ಠತೆಯಲ್ಲೂ ಬರುವುದಿಲ್ಲ ಎಂಬುದನ್ನ ಇಲ್ಲಿ ಸ್ಮರಿಸಬಹುದಾಗಿದೆ.