ನವಲೂರ ಶಾಲೆಯ ಹೆಸರಲ್ಲಿ “18” ವರ್ಷದಿಂದ ಸಂಬಳ ಪಡೆಯುತ್ತಿರುವ PE ಮಾಸ್ತರ್ “ಬಸಾಪುರ”- SDMC ಎಚ್ಚರಿಕೆ…

ಧಾರವಾಡ: ನವಲೂರ ಪ್ರೌಢಶಾಲೆಯಲ್ಲಿ 300ಕ್ಕೂ ಹೆಚ್ಚು ಮಕ್ಕಳಿದ್ದರೂ ದೈಹಿಕ ಶಿಕ್ಷಕರನ್ನ ಓಓಡಿ ಮೇಲೆ ಧಾರವಾಡ ಶಹರದಲ್ಲಿ ಬಳಸಿಕೊಳ್ಳುವ ಷಡ್ಯಂತ್ರವನ್ನ ಈ ಬಾರಿಯೂ ಮುಂದುವರೆಸಿದ್ದು, ಡಿಡಿಪಿಐ ಮತ್ತು ಡಿವೈಪಿಸಿ ಹೊಸದಾದ ಮಾರ್ಗವನ್ನ ಅನುಸರಿಸುವ ಯತ್ನಕ್ಕೆ ಇಳಿದಿದ್ದಾರೆಂದು ಗೊತ್ತಾಗಿದೆ.
ನವಲೂರ ಪ್ರೌಢಶಾಲೆಯ ಎಸ್‌ಡಿಎಂಸಿಯವರು ಬಿಇಓ, ಡಿಡಿಪಿಐ ಅವರಿಗೆ ಮನವಿ ಕೊಟ್ಟು ಶಿಕ್ಷಕ ಶಶಿಕಾಂತ ಬಸಾಪುರ ಅವರ ಕಾರ್ಯವನ್ನ ‘ಕೊಂಡಾಡಿದ್ದಾರೆ’. ಹಾಗಾಗಿಯೇ, ಅವರು ನಮಗೆ ಬೇಡವೇ ಬೇಡ ಎಂದು ಹೇಳಿದ್ದಾರೆ.
ಶಾಲೆಗೆ ಮರಳಿ ಹೋಗಿರುವ ಶಶಿಕಾಂತ ಬಸಾಪುರ ಮತ್ತೆ ಇಲ್ಲದ ಪೋಸ್ಟ್‌ಗೆ ಓಓಡಿ ಮಾಡಿಸಿಕೊಳ್ಳಲು ವಾಮ ಮಾರ್ಗವನ್ನ ಅನುಸರಿಸುತ್ತಿದ್ದಾರೆ. ತನಗೆ ಬೇಕಾದ ಕೆಲವು ಶಿಕ್ಷಕರನ್ನ ಕರೆದುಕೊಂಡು ಸಿಇಓಗೆ ಭೇಟಿಯಾಗಿ ಕೆಲಸ ಮಾಡಿಸಿಕೊಳ್ಳುವ ಪ್ರಯತ್ನ ಮುಂದುವರೆದಿದೆ.
ಸರಕಾರದ ಸಂಬಳ ಪಡೆದು, ಪಿಜಿ- ಹೊಟೇಲ್ ಮತ್ತು ಬಡ್ಡಿ ದಂಧೆಯಲ್ಲಿ ತೊಡಗಿರುವ ಮನಸ್ಥಿತಿ ಹೊಂದಿರುವ ಕೆಲವರು ತಮಗಾಗಿ ಯಾವೂದಾದರೂ ಮಾರ್ಗವನ್ನ ಅನುಸರಿಸಿಕೊಳ್ಳುವುದು ಹೊಸದೇನಲ್ಕವಲ್ವಾ…